ಬೆಂಗಳೂರು: ಬಾಂಗ್ಲಾ ದೇಶ ಯುವತಿಯ ಗ್ಯಾಂಗ್ ರೇಪ್ ಕೇಸ್ ಸಂಬಂಧಿಸಿದ ಆಗಿನಿ ಡಿಸಿಪಿ ಶರಣಪ್ಪ ಮತ್ತು ಇಂದಿನ ಡಿಸಿಪಿ ಪ್ರತಿಕ್ರಿಯಿಸಿದ್ದು, ಪ್ರಕರಣ ದಾಖಲಾಗ್ತಿದ್ದಂತೆಯೇ ವಿಶೇಷ ತಂಡಗಳನ್ನ ರಚಿಸಿ ತನಿಖೆ ಶುರು ಮಾಡಿ ನಮ್ಮವರು ಕೆಲಸ ಮಾಡಿದ್ರೂ. ತಮಿಳುನಾಡು, ಹೈದ್ರಾಬಾದ್ ನಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿತ್ತು.
ಡಿಜಿಟಲ್ ಎವಿಡೆನ್ಸ್ ಪ್ರಮುಖವಾಗಿ ಸಾಕಷ್ಟು ಕಲೆಕ್ಟ್ ಮಾಡಿಪ್ರಕರಣ ಸಂಬಂಧ 12 ಜನರನ್ನ ಬಂಧಿಸಿ,ಒಂದೇ ತಿಂಗಳಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಕೂಡ ಸಲ್ಲಿಸಿದ್ವಿ ಅದ್ರಿಂದ ಇಂದು ಯುವತಿಗೆ ನ್ಯಾಯ ಸಿಕ್ಕಿದೆ ಎಂದುಅಂದಿನ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹೇಳಿದ್ರು.
ಪೂರ್ವ ವಿಭಾಗದ ಡಿಸಿಪಿ ಭಿಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿಕೇಸ್ ನ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟಣೆಯಾಗಿದೆ.ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 1ಒಬ್ಬನಿಗೆ 5 ವರ್ಷ ಜೈಲು, ಮತ್ತೊಬ್ಬ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ ಎಂದ್ರು
PublicNext
21/05/2022 12:11 pm