ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್ ರಾಬರಿ ಕೇಸ್ ಎಫ್ಐಆರ್‌ ಆಗಲೇಬೇಕು; ಕಮಿಷನರ್ ಖಡಕ್ ಸೂಚನೆ

ನಗರದಲ್ಲಿ ದಿನದಿಂದ ದಿನಕ್ಕೆ ರಾಬರಿ ಪ್ರಕರಣ ಹೆಚ್ಚಾದ ಹಿನ್ನೆಲೆ ಪೊಲೀಸ್ ಇಲಾಖೆ ಫುಲ್ ಆಲರ್ಟ್ ಆಗಿದೆ.‌‌ ಠಾಣೆಗೆ ಮೊಬೈಲ್ ರಾಬರಿ ಬಗ್ಗೆ ದೂರು ಕೊಡಲು ಬಂದರೆ ಕಡ್ಡಾಯವಾಗಿ ಎಫ್ಐಆರ್ ಮಾಡಬೇಕು ಅಂತಾ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ವಾರ್ಷಿಕ ಸಭೆಯಲ್ಲಿ ಚರ್ಚಿಸಲಾಗಿದ್ದು, ಮೊಬೈಲ್ ಕಳೆದು ಹೋದರೆ ಮಾತ್ರ ಈ ಲಾಸ್ ನಲ್ಲಿ ದೂರು ನೀಡಬಹುದು. ಆದರೆ, ಮೊಬೈಲ್ ರಾಬರಿಯಾದ್ರೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ದೂರು ನೀಡಬಹುದು. ಇತ್ತೀಚೆಗೆ ನಗರದಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಅನೇಕರು ಈ ಲಾಸ್ ನಲ್ಲಿ ದೂರು ನೀಡುತ್ತಿದ್ದಾರೆ.‌‌

ಈ ರೀತಿಯ ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿಯೇ ದೂರು ನೀಡಿ ಎಂದು ಸಾರ್ವಜನಿಕರಿಗೆ ಕಮಿಷನರ್ ತಿಳಿಸಿದ್ದಾರೆ. ಪೊಲೀಸರು ಇಂತಹ ಪ್ರಕರಣಗಳಲ್ಲಿ ಶೀಘ್ರ ಎಫ್ಐಆರ್ ದಾಖಲಿಸಲೇಬೇಕು. ನಿರ್ಲಕ್ಷ್ಯಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Edited By :
PublicNext

PublicNext

26/07/2022 04:10 pm

Cinque Terre

28.2 K

Cinque Terre

0

ಸಂಬಂಧಿತ ಸುದ್ದಿ