ಪಿಎಸ್ಐ ಹಗರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ ವಿಚಾರ ಮಾಸುವ ಮುನ್ನವೇ ಪೊಲೀಸ್ ಕೆಲಸ ಕೊಡಿಸುವುದಾಗಿ ಇಬ್ಬರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ದೊಡ್ಡಬಳ್ಳಾಪುರ ಮೂಲದ ಜ್ಞಾನಮೂರ್ತಿ ಆನೇಕಲ್‌ನ ಸುಣವಾರದಲ್ಲಿ ನಿವೃತ್ತ ಪಿಎಸ್ಐ ಎಂದು ಹೇಳಿ ಹಣ ಪಡೆದು ವಂಚಿಸಿರುವ ಆರೋಪಿ. ಇನ್ನು ಆರೋಪಿ ಜ್ಞಾನಮೂರ್ತಿ ನಾನೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ನಾನು ನಿಮಗೆ ಕೆಲಸ ಕೊಡಿಸುತ್ತೇನೆ ಈಗಾಗಲೇ ಕಮಿಷನರ್ ಪಿ.ಎ ಇಕ್ಬಾಲ್ ಎಂಬುವರ ಬಳಿ ಮಾತನಾಡಿದ್ದೇನೆ ಎರಡು ದಿನದಲ್ಲಿ ಐಡಿಕಾರ್ಡ್ ಕಾರ್ಡ್ ಜೊತೆಗೆ ಒಂದು ಪೋಸ್ಟ್‌ಗೆ ೨೨ ಲಕ್ಷ ಆಫರ್ ಇದೆ ನಂಬಿಸಿ ಇಬ್ಬರು ಯುವಕರ ಬಳಿ ಹಣವನ್ನು ಪಡೆದು ಪರಾರಿಯಾಗಿದ್ದಾನೆ.
ಪೋಲೀಸ್ ಕೆಲಸದ ಆಸೆಗೆ ಹಣ ನೀಡಿರುವ ಆನಂದ್ ಹಾಗು ಕಿಶೋರ್ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಇನ್ನು ಪೊಲೀಸ್ ಕೆಲಸ ಕೊಡಿಸುವುದಾಗಿ ಹಣಪಡೆದಿರುವ ಆಡಿಯೋ ಸಂಭಾಷಣೆ ಲಬ್ಯವಾಗಿದೆ. ಅದು ಮಾತ್ರವಲ್ಲದೆ ಆರೋಪಿ ಜ್ಞಾನಮೂರ್ತಿಯು ರವಿ ಎಂಬುವವರಿಗೆ ಠಾಣೆಯಲ್ಲಿ ಸೀಜ್ ಮಾಡಿರುವ ಕಬ್ಬಿಣದ ಶೆಡ್ ಕೊಡಿಸುತ್ತೇನೆಂದು ಎಪ್ಪತ್ತು ಸಾವಿರ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ವಂಚನೆಗೊಳಗಾದ ಯುವಕರು ಮೂರು ಮಂದಿ ಇನ್ನಷ್ಟು ಮಂದಿಗೆ ವಂಚಿಸಿರುವ ಸಾದ್ಯತೆ ಇದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
14/07/2022 01:23 pm