ನೆಲಮಂಗಲ: ಪರೀಕ್ಷೆಯ ದಿನಾಂಕ ತಿಳಿಯದೆ, ಪರೀಕ್ಷೆಗೆ ಹೋಗೋದು ಮರೆತು ಹೋದ ಹಿನ್ನೆಲೆಯಲ್ಲಿ ಬಾಲಕಿಯೋರ್ವಳು ನೇಣಿಗೆ ಕೊರಳೊಡ್ಡಿದ ದಾರುಣ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
10ನೇ ತರಗತಿ ವ್ಯಾಸಂಗ ಮಾಡ್ತಿದ್ದ ಪ್ರೀತಿ ಎಂಬ 15ರ ಹರೆಯದ ವಿದ್ಯಾರ್ಥಿನಿ
ನನ್ನ ಸಾವಿಗೆ ಯಾರೂ ಕಾರಣರಲ್ಲ, ಕ್ಷಮಿಸಿ ಅಂತ ಪೋಷಕರಿಗೆ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಿರಿಯೂರು ಮೂಲದ ವೆಂಕಟೇಶ್ ಎಂಬವರ ಮಗಳಾದ ಪ್ರೀತಿ, ಚಿಕ್ಕಬಿದರಕಲ್ಲು ಗ್ರಾಮದ ಶಾಲೆಯಲ್ಲಿ ಎಸ್ಸೆಸೆಲ್ಸಿ ವ್ಯಾಸಂಗ ಮಾಡ್ತಿದ್ದು, ನೆನ್ನೆ ಹಿಂದಿ ಪರೀಕ್ಷೆಗೆ ಬರೆಯಲು ಮರೆತು ಗೈರುಹಾಜರಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದು ಬಂದಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/04/2022 09:18 pm