ದೊಡ್ಡಬಳ್ಳಾಪುರ: ಪ್ರತಿದಿನ ಗ್ರಾಹಕರ ಮನೆಬಾಗಿಲಿಗೆ 45 ಡೆಲಿವರಿ ಮಾಡ್ಬೇಕೆಂದು ಟಾರ್ಗೆಟ್ ಫಿಕ್ಸ್ ಮಾಡಿ ಕಾರ್ಮಿಕರ ಶೋಷಣೆಯನ್ನು ಡೆಲಿವರಿ ಡಾಟ್ ಕಾಮ್ ಕಂಪನಿ ಮಾಡುತ್ತಿದೆ. ಕಂಪನಿಯ ಶೋಷಣೆ ಪ್ರಶ್ನಿಸಿದ 18 ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಸಂಚನ್ನೂ ನಡೆಸಿದೆ.
ದೊಡ್ಡಬಳ್ಳಾಪುರ ನಗರ ವಿನಾಯಕ ನಗರದ ಕೋರ್ಟ್ ರಸ್ತೆಯಲ್ಲಿರೋ ಡೆಲಿವರಿ ಡಾಟ್ ಕಾಮ್ ನಿರಂತರ ತನ್ನ ಕಾರ್ಮಿಕರ ಶೋಷಣೆಯಲ್ಲಿ ತೊಡಗಿದೆ. 2 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಡೆಲಿವರಿ ಡಾಟ್ ಕಾಮ್, ಅನ್ ಲೈನ್ ನಲ್ಲಿ ಬುಕ್ ಮಾಡಿದ ವಸ್ತುಗಳನ್ನು ಗ್ರಾಹಕರ ಮನೆಗೆ ತಲುಪಿಸುವ ಕೆಲಸ ಇಲ್ಲಿನ ಕಾರ್ಮಿಕರು ಮಾಡುತ್ತಾರೆ.
ಪ್ರತಿದಿನ 45 ಡೆಲಿವರಿ ಮಾಡಲೇ ಬೇಕೆಂಬ ಟಾರ್ಗೆಟ್ ನ್ನು ಮ್ಯಾನೇಜರ್ಸ್ ಮಂಜುನಾಥ್ ಮತ್ತು ಅರುಣ್ ಫಿಕ್ಸ್ ಮಾಡಿದ್ದಾರೆ. ಗ್ರಾಹಕರು ಪಾರ್ಸೆಲ್ ಪಡೆಯದೆ ರಿಜೆಕ್ಟ್ ಮಾಡಿದರೆ ಆ ಹೊಣೆ ಕಾರ್ಮಿಕನ ತಲೆ ಮೇಲೆ ಹಾಕ್ತಾರೆ! ಒಂದು ವೇಳೆ ಟಾರ್ಗೆಟ್ ರೀಚ್ ಮಾಡದಿದ್ದರೆ ಸಂಬಳದಲ್ಲಿ ಕಟ್ ಮಾಡುತ್ತಾರೆ. ಈ ಮ್ಯಾನೇಜರ್ ಗಳು, ಕಾರ್ಮಿಕರಿಗೆ ಮಾನಸಿಕ ಕಿರುಕುಳ ನೀಡುತ್ತಾ 2 ತಿಂಗಳಿಂದ ಶೋಷಣೆ ಮಾಡುತ್ತಿದ್ದಾರೆ.
ಪೆಟ್ರೋಲ್ ಭತ್ಯೆ ಕೊಡುವಲ್ಲಿಯೂ ವಂಚಿಸುತ್ತಿದ್ದಾರೆ. ರಾತ್ರಿ 9ರ ನಂತರ ರಕ್ಷಣೆ ಕೊಡದೆ ನಿರ್ಜನ ಪ್ರದೇಶಗಳಿಗೂ ಡೆಲಿವರಿಗೆ ಕಳಿಸ್ತಾರೆ. ಪಿಎಫ್- ಇಎಸ್ ಐ ಇಲ್ಲ, 2 ವರ್ಷ ಪೂರೈಸಿದ ಕಾರ್ಮಿಕರನ್ನು ಕಂಪನಿ ಎಂಪ್ಲಾಯಿ ಮಾಡಬೇಕೆಂಬ ಕಾರಣಕ್ಕೆ 18 ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಹುನ್ನಾರ ನಡೆದಿದೆ ಎಂದು ಕಾರ್ಮಿಕರು ತಮ್ಮ ನೋವು ತೋಡಿಕೊಂಡಿದ್ದಾರೆ.
PublicNext
13/03/2022 03:42 pm