ಬೆಂಗಳೂರು: ಶಾಲೆ ಆಡಳಿತ ಮಂಡಳಿಯಿಂದ ವಿದ್ಯಾರ್ಥಿನಿಗೆ ಕಿರುಕುಳ ಹಿನ್ನೆಲೆ ಡೆತ್ ನೋಟ್ ಬರೆದಿಟ್ಟು 9 ನೇ ತರಗತಿ ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಸಾವಿಗೆ ಶರಣಾದ ಘಟನೆ ಟಿ.ದಾಸರಹಳ್ಳಿ ಸಮೀಪದ ಶೆಟ್ಟಹಳ್ಳಿ ಬಳಿ ನಡೆದಿದೆ.
ಟಿ.ದಾಸರಹಳ್ಳಿಯ ಸೌಂದರ್ಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ರಮ್ಯಮೂರ್ತಿ (15) ರೈಲಿಗೆ ಸಿಲುಕಿ ಸಾವನ್ನಪ್ಪಿದ್ದು, ಈ ಹಿಂದೆ ಇದೇ ಶಾಲಾ ಆಡಳಿತ ಮಂಡಳಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ಮೃತ ವಿದ್ಯಾರ್ಥಿನಿ ತಾಯಿ ದೂರು ನೀಡಿದ್ರಂತೆ.
ಇದೇ ವಿಚಾರವಾಗಿ ವಿದ್ಯಾರ್ಥಿನಿ ರಮ್ಯಳಿಗೆ ಕಿರುಕುಳ ನೀಡುತ್ತಿದ್ದು, ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಡೆತ್ ನೋಟ್ ನಲ್ಲಿ Dear, school marks is not every thing, I Hate You Principal ಹಾಗೂ I HATE U ALL BOY ಕೆಲವು ಸಹಪಾಠಿಗಳ ಹೆಸರು ಬರೆದಿಟ್ಟು, ನಿನ್ನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿ ಬಳಿ ರೈಲಿಗೆ ಸಿಲುಕಿ ರಮ್ಯ ಮೂರ್ತಿ ಸಾವಿಗೆ ಶರಣಾಗಿದ್ದಾಳೆ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
19/02/2022 11:42 am