ಹೊಸಕೋಟೆ :ಕೆಜಿಎಫ್ ಚಿತ್ರದಲ್ಲಿ ಯಶ್ ತಾಯಿ ಪಾತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್ ಕೋಲಾರ ಮೂಲದವರು.
ಇಂದು ಕೋಲಾರದ ಜಯನಗರದಲ್ಲಿರುವ ಸಪ್ಪಲಮ್ಮ ದೇವಾಲಯಕ್ಕೆ ಭೇಟಿ ನೀಡಿದ ಅರ್ಚನಾ. ಕೋಲಾರದವರಾಗಿ
ಕೆಜಿಎಫ್ ಸಿನಿಮಾ ಯಶಸ್ವಿಯಾದ ಹಿನ್ನೆಲೆ ಕೋಲಾರದ ದೇವಾಲಯಕ್ಕೆ ಅರ್ಚನಾ ಭೇಟಿ ನೀಡಿ ದೇವರಿಗೆ ನಮಿಸಿದರು. ಸ್ಥಳೀಯರ ಜನತೆ ಅರ್ಚನಾ ಜೋಯಿಸ್ ಅವರಿಗೆ ಅದ್ದೂರಿ ಸ್ವಾಗತ ನೀಡಿ ಗೌರವ ಸಮರ್ಪಿಸಿದರು.
ಇದೇ ವೇಳೆ ಅರ್ಚನಾ ಜೋಯಸ್ ಅವರ ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಜನ ನಾ ಮುಂದು ತಾಮಂದು ಎಂದು ಮುಗಿಬಿದ್ದರು. ವಿಪರ್ಯಾಸವೆಂದರೆ ಅರ್ಚನಾರವರು ಕೂಲ್ ಆಗಿದ್ದರೆ, ಅಭಿಮಾನಿಗಳು ಅತಿಯಾದ ಎಕ್ಸೈಟ್ಮೆಂಟ್‌ಗೆ ಒಳಗಾಗಿದ್ದರು.
PublicNext
20/04/2022 12:13 pm