ನೆಲಮಂಗಲ: ಇಂದು ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಅಪ್ಪು ಅಗಲಿಕೆಯ ನೋವಿನ ನಡುವೆ ಅಭಿಮಾನಿಗಳು ಅಪ್ಪು ಭಾವಚಿತ್ರಕ್ಕೆ ಪುಪ್ಪಾಲಂಕಾರ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ನೆಲಮಂಗಲ ನಗರದ ಸೊಂಡೆಕೊಪ್ಪ ರಸ್ತೆ ಆನಂದ್ ಬಾರ್ ಬಳಿ ಅಪ್ಪು ಹುಟ್ಟು ಹಬ್ಬದ ಅಂಗವಾಗಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಾವಿರಾರು ಅಭಿಮಾನಿಗಳಿಗೆ ಬಾರ್ ಆನಂದ್ ಮತ್ತು ಮಕ್ಕಳು ಅನ್ನದಾಸೋಹ ಮಾಡಿದ್ರು. ಯುವರತ್ನ, ಪವರ್ ಸ್ಟಾರ್ ಪುನೀತ್ ಆದರ್ಶವೇ ನಮಗೆ ಪ್ರೇರಣೆ ಎಂದರು. ಅಲ್ಲದೇ ಪುನೀತ್ ಅಭಿಮಾನಿಯೋರ್ವ ಅಪ್ಪು ಸಖತ್ ಸ್ಟೆಪ್ ಹಾಕಿ ಗಮನ ಸೆಳೆದರು.
Kshetra Samachara
17/03/2022 04:27 pm