ಬೆಂಗಳೂರು: ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಿದ್ದಾರೆ. ವಿಮಾನದ ಮೂಲಕ ಎಚ್‌ಎಎಲ್‌ಗೆ ಬಂದಿಳಿದ ಅಲ್ಲು ಅರ್ಜುನ್, ರಾಜ್ ಫ್ಯಾಮಿಲಿಯಯನ್ನ ಮೀಟ್ ಆಗಿದ್ದಾರೆ. ಯಾರನ್ನ ಮೀಟ್ ಆಗಿದ್ದಾರೆ. ನಂತರ ಎಲ್ಲಿಗೆ ಹೋದರು. ಆ ಎಲ್ಲ ಡಿಟೈಲ್ಸ್ ಇಲ್ಲಿದೆ.
ಪುಷ್ಪ ಚಿತ್ರ ಖ್ಯಾತಿಯ ನಟ ಅಲ್ಲು ಅರ್ಜುನ್ ಇವತ್ತು ರಾಜ್ ಫ್ಯಾಮಿಲಿಯನ್ನ ಮೀಟ್ ಆಗಿದ್ದಾರೆ.ಮೊದಲ ನಾಗರವಾರದ ಶಿವರಾಜ್ ಕುಮಾರ್ 'ಶ್ರೀಮುತ್ತು' ಮನೆಗೆ ಬಂದ್ರು.ಅಲ್ಲಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರನ್ನ ಭೇಟಿಯಾಗಿ ಮಾತನಾಡಿದ್ದಾರೆ.
ಇಲ್ಲಿಂದ ನೇರವಾಗಿ ಸದಾಶಿವನಗರಕ್ಕೆ ಬಂದಿರೋ ಅಲ್ಲು ಅರ್ಜುನ್, ಪುನೀತ್ ಅವರ ಮನೆಗೂ ಭೇಟಿಕೊಟ್ಟರು. ಪುನೀತ್ ಭಾವ ಚಿತ್ರಕ್ಕೂ ನಮಿಸಿದರು.ಇದಾದ ಮೇಲೆ ಕಂಠೀರವ ಸ್ಟುಡಿಯೋದಲ್ಲಿರೋ ಪುನೀತ್ ಸಮಾಧಿಗೆ ಭೇಟಿಕೊಟ್ಟರು.
PublicNext
03/02/2022 07:28 pm