ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼಅಪ್ಪುʼ ಅಭಿಮಾನ; ಪೊಲೀಸರಿಂದ ಕಾಲ್ನಡಿಗೆ ಯಾನ, ನೇತ್ರದಾನ

ಬೆಂಗಳೂರು: ಅಭಿಮಾನಕ್ಕೆ ಅಧಿಕಾರಿಗಳು, ಜನಸಾಮಾನ್ಯರು, ಪೊಲೀಸರು, ವಕೀಲರು ಎಂಬ ಬೇಧಭಾವಗಳಿರುವುದಿಲ್ಲ. ಆಡುಗೋಡಿ ಪೊಲೀಸ್ ಕ್ವಾಟ್ರಸ್ ನ 16 ಪೊಲೀಸ್ ಸಿಬ್ಬಂದಿ ಪುನೀತ್ ‌ಮೇಲಿನ ಅಭಿಮಾನದಿಂದ ಆಡುಗೋಡಿಯಿಂದ ಕಂಠೀರವ ಸ್ಟುಡಿಯೋವರೆಗೂ ಸುಮಾರು 15 ಕಿ.ಮೀ. ವರೆಗೆ ಇಂದು ಪಾದಯಾತ್ರೆ ನಡೆಸಿದರು.

ಮುಂಜಾವ 5 ಗಂಟೆಗೆ ಹೊರಟ 16 ಜನರಲ್ಲಿ ಕೆಲವರು ನಡೆದುಕೊಂಡು ಬಂದರೆ, ಕೆಲವರು ಓಡಿಕೊಂಡು ಕಂಠೀರವ ಸ್ಟುಡಿಯೋ ತಲುಪಿದ್ದಾರೆ. ಈ 16 ಮಂದಿ ಕಂಠೀರವ ಸ್ಟುಡಿಯೋ ಬಳಿಯ ನೇತ್ರದಾನ ಸೆಂಟರ್‌ನಲ್ಲಿ ನೋಂದಣಿ ಮಾಡಿಸಿ ನೇತ್ರದಾನಕ್ಕೆ ಮುಂದಾಗಿರುವುದು ಪ್ರಶಂಶನೀಯ.

ನರಸಿಂಹರಾಜು ಎಂಬವರು ಪುನೀತ್ ನಿಧನರಾದಾಗ ಕೆಲಸದ ಒತ್ತಡದಲ್ಲಿ ದರ್ಶನ ಪಡೆಯಲಾಗಿರಲಿಲ್ಲ. ಆಗ ಪಾದಯಾತ್ರೆ ಮೂಲಕ ಒಬ್ಬರೇ ಕಂಠೀರವ ಸ್ಟುಡಿಯೋ ತಲುಪಿ ಪುನೀತ್ ಅವರ ಸಮಾಧಿಯ ದರ್ಶನ‌ ಪಡೆದಿದ್ದರು. ಇದರಿಂದ ಪ್ರೇರಿತರಾದ ಆಡುಗೋಡಿ ‌ಪೊಲೀಸ್ ಕ್ವಾಟ್ರಸ್ ನ 16 ಸಿಬ್ಬಂದಿ ಇದೀಗ ಪಾದಯಾತ್ರೆ ಮೂಲಕ ಪುನೀತ್ ಮೇಲಿನ ಅಭಿಮಾನವನ್ನು ತೋರಿಸಿದ್ದಾರೆ.

Edited By : Shivu K
Kshetra Samachara

Kshetra Samachara

20/12/2021 02:11 pm

Cinque Terre

782

Cinque Terre

0

ಸಂಬಂಧಿತ ಸುದ್ದಿ