ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹೊಸತೊಡಕಿಗೆ ಗುಡ್ಡೆಮಾಂಸದ ಭರ್ಜರಿ ಖರೀದಿ : ಹಳ್ಳಿಕಡೆ ಮುಖಮಾಡಿದ ಪ್ಯಾಟೆ ಮಂದಿ

ದೇವನಹಳ್ಳಿ : ಹಿಂದುಗಳಿಗೆ ಯುಗಾದಿ ವರ್ಷದ ಆರಂಭ. ಮೊದಲ ಹಬ್ಬದ ದಿನ ಸಿಹಿ ಹೋಳಿಗೆ ಊಟ ವ್ಯವಸ್ಥೆ ಇರುತ್ತೆ. ನಂತರ ಎರಡನೇ ದಿನ ಕಾರದ ಮಾಂಸದೂಟ.ಈ ಮಾಂಸದೂಟದ ದಿನವನ್ನು ಕರ್ನಾಟಕದ ಕೆಲವು ಕಡೆ ಹೊಸ್ತಡಗು, ಹೊಸ್ತಡಕು, ಹೊಸತೊಡಕು, ವರ್ಷತೊಡ್ಗು ಅಂತೆಲ್ಲಾ ಕರೆಯುತ್ತಾರೆ.

ಹಬ್ಬದ ಮಾರನೆ ದಿನ ಹೊಸತೊಡಕನ್ನು ಸಂಭ್ರಮ ದಿಂದ ಈ ಭಾಗದ ಜನ ಆಚರಿಸುವುದು ತಲೆ ತಲಾಂತರಗಳ ವಾಡಿಕೆ.

ಹೊಸತೊಡಕಿಗೆ ಈ ವರ್ಷ ಕುರಿ, ಮೇಕೆ, ಕೋಳಿ ಮಾಂಸಕ್ಕೆ ಬಹಳ ಬೇಡಿಕೆ ಏರ್ಪಟ್ಟಿದೆ. ಈ ಸಲ ಹಲಾಲ್ ಕಟ್, ಜಟ್ಕಾಕಟ್ ಬೆಳವಣಿಗೆಗಳ ಸಮರದಿಂದ ಬೆಂಗಳೂರಿನ ಜನ ನಗರದ ಕಡೆಯಿಂದ ಹಳ್ಳಿಯಕಡೆ ಮುಖ ಮಾಡಿದ್ದಾರೆ.

ದೇವನಹಳ್ಳಿ ಸುತ್ತಮುತ್ತಾ ಹಲಾಲ್ ಕಟ್ ಗೆ ಗುಡ್ ಬೈ ಹೇಳಿ ಜಟ್ಕಾಕಟ್ ಗೆ ಜನ ಮುಖ ಮಾಡಿದ್ದಾರೆ.

ಹಿಂದಿನ ಕಾಲದ ವಾಡಿಕೆಯಂತೆ ಹಳ್ಳಿಗಳಲ್ಲಿ ಮೊದಲಿಗಿದ್ದ ಗುಡ್ಡೆ ಮಾಂಸಕ್ಕೆ ಅತಿಹೆಚ್ಚು ಬೇಡಿಕೆ ಉಂಟಾಗಿದೆ.

ಶನಿವಾರ ರಾತ್ರಿ ಹತ್ತುಗಂಟೆ ಆಗುತ್ತಿದ್ದಂತೆ ಮಾಂಸ ಖರೀದಿಗೆ ನಗರಗಳ ಜನ ಆಗಮಿಸಿದ್ದಾರೆ. ಗ್ರಾಹಕರಿಗೆ ಉತ್ತಮ ಮಾಂಸ ಒದಗಿಸುವ ಕಾರ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಯಲಿಯೂರು ರೈತರೇ ಸೇರಿಕೊಂಡು DNF ಸಂಸ್ಥೆ ರೂಪಿಸಿ ಕೊಂಡಿದ್ದಾರೆ. ಎಲ್ಲಾ ಮಾಂಸ ಮಾರಾಟಗಾರರಿಗಿಂತ ಮೂವತ್ತು ರೂಪಾಯಿ ಕಡಿಮೆಗೆ ರೈತರಿಂದ ಖರೀಸಿದ ಕುರಿ, ಮೇಕೆ, ಕೋಳಿ ಮಾಂಸ ಮಾರಾಟ ಮಾಡುತ್ತಿದೆ DNF ಸಂಸ್ಥೆ.

ಹಿಂದೂ ಧಾರ್ಮಿಕ ಪದ್ದತಿಯಂತೆ ಮಾಂಸ ಮಾರಾಟ ಮಾಡುತ್ತಿರುವುದರಿಂದ ನಗರದ ಜನ ಹಳ್ಳಿಯತ್ತ ಮುಖಮಾಡಿದ್ದಾರೆ.

Edited By : Shivu K
PublicNext

PublicNext

03/04/2022 11:02 am

Cinque Terre

43.09 K

Cinque Terre

4

ಸಂಬಂಧಿತ ಸುದ್ದಿ