ಕೈಗಾರಿಕೆಗಳ ಕಚ್ಚಾ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಕೈಗಾರಿಕೆಗಳನ್ನು ನಡೆಸಲು ಕಷ್ಟವಾಗಿದ್ದು ಅಖಿಲ ಕರ್ನಾಟಕ ಕೈಗಾರಿಕೆಗಳ ಒಕ್ಕೂಟದ ಆದೇಶದ ಮೇರೆಗೆ ಇದೇ ತಿಂಗಳ ಸೋಮವಾರ 20 ರಂದು ಇಡೀ ಪೀಣ್ಯಾ ಕೈಗಾರಿಕೆಗಳನ್ನು ಒಂದು ದಿನ ಬಂದ್ ಮಾಡೋದಾಗಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಮುರಳೀಕೃಷ್ಣ ಎಚ್ಚರಿಕೆ ನೀಡಿದ್ದಾರೆ..
ಪೀಣ್ಯ ಕೈಗಾರಿಕಾ ಸಂಘದ ಕೇಂದ್ರ ಕಛೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಚ್ಚಾವಸ್ತುಗಳ ಬೆಲೆ ಶೇ 60-70 % ಹೆಚ್ಚಳವಾದ ಕಾರಣ ಸರಕು ಸಾಗಾಣಿಕೆ ಸರಿಯಾಗಿ ಮಾಡದೇ ಸಣ್ಣ ಹಾಗೂ ಅತೀ ಮಧ್ಯಮ ಕೈಗಾರಿಕೆಗಳ ಅವನತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣವಾಗಿದ್ದು ದೇಶದ ಸಣ್ಣ ಕೈಗಾರಿಕೆಗಳು ಸುಮಾರು 18 ತಿಂಗಳುಗಳಿಂದ ಸಂಕಷ್ಟ ಎದುರಿಸುತ್ತಿವೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 16000 ಸಾವಿರ ಕೈಗಾರಿಕೆಗಳಿದ್ದು, ಇಲ್ಲಿನ ಕೈಗಾರಿಕೆಗಳಿಂದ ಪ್ರತಿವರ್ಷ 3000 ಕೋಟಿಯಷ್ಟು ತೆರಿಗೆಯನ್ನು ಕೇವಲ ಪೀಣ್ಯ ಕೈಗಾರಿಕಾ ಪ್ರದೇಶದಿಂದಲೇ ಪಾವತಿ ಮಾಡುತ್ತೇವೆ. ಆದ್ರು ಸರ್ಕಾರಗಳು ಮಾತ್ರ ಮಲತಾಯಿ ಧೋರಣೆ ಮಾಡುತ್ತವೆ ಎಂದರು.
ಅಲ್ಲದೇ ನಮ್ಮನ್ನ ನಷ್ಟಕ್ಕೆ ದೂಡಿ, ಸ್ಟೀಲ್ ಕಂಪನಿಗಳು ಸಾವಿರಾರು ಕೋಟಿ ಲಾಭಗಳಿಸುತ್ತಿವೆ ಕಬ್ಬಿಣದ ಬೆಲೆಯನ್ನು ಅವರ ಇಚ್ಚೆಗೆ ಅವರು ಏರಿಸುತ್ತಾ ಹೋಗಿದ್ದಾರೆ. ಇದನ್ನ ಸರ್ಕಾರ ಪ್ರಶ್ನೆ ಮಾಡಬೇಕಾಗಿದೆ. ಅಲ್ಲದೇ ಸಣ್ಣ ಕೈಗಾರಿಗಳಿಗೆ ಹೆಚ್ಚಿನ ತೆರಿಗೆಗಳನ್ನ ಸರ್ಕಾರಗಳು ವಿದಿಸುತ್ತಿವೆ. ಕಚ್ಚಾವಸ್ತುಗಳ ಬೆಲೆ ಕಡಿಮೆ ಆದರೆ ಮಾತ್ರ ಸಣ್ಣ ಕೈಗಾರಿಕೆಗಳು ಉಳಿಯುತ್ತವೆ ಇಲ್ಲದಿದ್ದರೆ ಅವನತಿಯತ್ತ ಸಾಗುತ್ತವೆ ಎಂದರು. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರಕ್ಕೆ 1 ವರ್ಷದಿಂದ ಎಷ್ಟೇ ಮನವಿ ಮಾಡಿದ್ರು ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಡಿ.20 ರಂದು ದೇಶಾದ್ಯಂತ ಒಂದು ದಿನದ ಮಟ್ಟಿಗೆ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ. ಈ ಪ್ರತಿಭಟನೆಯಲ್ಲಿ ರಾಜ್ಯದ 134 ಹಾಗೂ ದೇಶದ 250 ಕೈಗಾರಿಕಾ ಸಂಘಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ.ಈ ಸಂಬಂಧ ಬೆಲೆ ಏರಿಕೆ ಕುರಿತು ರಾಜ್ಯಪಾಲರಿಗೆ ಮನವಿ ಪತ್ರ ನೀಡುತ್ತೇವೆ ಎಂದು ಅಧ್ಯಕ್ಷ ಮುರುಳಿಕೃಷ್ಣ ತಿಳಿಸಿದರು...
ಇದೇ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಪದ್ಮನಾಭ್ ಮಾತನಾಡಿ ಕಬ್ಬಿಣ ಉತ್ಪಾದಕರ ಲಾಬಿಯಿಂದ ಕಚ್ಚಾ ವಸ್ತು ಬೆಲೆ ಪ್ರತಿ ವಾರಕ್ಕೊಮ್ಮೆ ಹೆಚ್ಚಳ ಆಗುತ್ತದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಇದನ್ನ ತನಿಖೆ ಮಾಡಬೇಕು, ಇದರಿಂದ 30% ಸಣ್ಣ ಕೈಗಾರಿಕೆಗಳು ರೋಗಗ್ರಸ್ತವಾಗಿದ್ದು, ಇದೇ ರೀತಿ ಕಚ್ಚಾ ವಸ್ತುಗಳು ಬೆಲೆಗಳು ಹೆಚ್ಚಳಾವಾಗುತ್ತಾ ಇದ್ದರೆ ನಾವು ಎಲ್ಲಾ ಕೈಗಾರಿಕೆಗಳನ್ನ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದರು.
Kshetra Samachara
17/12/2021 10:36 am