ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಟೋ ಚಾಲಕರಿಂದ ಸುಖಾಸುಮ್ಮನೆ ಹಲ್ಲೆ; ಸವಾರರು, ಚಾಲಕರಿಂದ ಪ್ರತಿಭಟನೆ

ಆಟೋ ಚಾಲಕರು ಸುಖಾಸುಮ್ಮನೆ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಆರೋಪಿಸಿ ಬೈಕ್ ಸವಾರರು ಹಾಗೂ ಟ್ಯಾಕ್ಸಿ ಚಾಲಕರು ಪತ್ರ ಹಿಡಿದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಜೊತೆಗೆ ಪ್ರತಿಭಟನೆ ಕೂಡ ನಡೆಸಿದ್ದಾರೆ.

ಹೌದು. ಸಿಲಿಕಾನ್ ಸಿಟಿಯಲ್ಲಿ ಆಟೋ ಟ್ಯಾಕ್ಸಿ ಸರ್ವಿಸ್‌ಗಳಂತೆ ಬೈಕ್, ಟ್ಯಾಕ್ಸಿ ಸರ್ವಿಸ್ ಕೂಡ ಇದೆ. ಆದರೆ ಆಟೋ ಚಾಲಕರು ನಮ್ಮ ಜೊತೆಗೆ ಸುಖಾಸುಮ್ಮನೆ ಜಗಳ ಆರಂಭಿಸಿ ಹಲ್ಲೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಬೈಕ್ ಸವಾರರು ಹಾಗೂ ಟ್ಯಾಕ್ಸಿ ಚಾಲಕರು ಗಂಭೀರ ಆರೋಪ ಮಾಡಿದ್ದಾರೆ.

ಆಟೋ ಚಾಲಕರು ಬೈಕ್, ಟ್ಯಾಕ್ಸಿ ಆ್ಯಪ್ ಮೂಲಕ ಬುಕ್ ಮಾಡಿ ಸ್ಥಳಕ್ಕೆ ಬರುವ ಸವಾರರು, ಚಾಲಕರನ್ನು ಹಿಡಿದು ಹಲ್ಲೆ ನಡೆಸುತ್ತಿದ್ದಾರೆ ಎಂದು ಬೈಕ್ ಸವಾರರು ಇಂದು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೈಕೋರ್ಟ್ ಆದೇಶದಂತೆ ಮುಂದಿನ ತೀರ್ಮಾನ ಕೈಗೊಳ್ಳುವವರೆಗೂ ನಗರದಲ್ಲಿ ಬೈಕ್, ಟ್ಯಾಕ್ಸಿ ಸರ್ವಿಸ್ ಚಾಲನೆಯಲ್ಲಿ ಇರಬಹುದು ಎಂದು ಹೈಕೋರ್ಟ್ ಹೇಳಿದೆ. ಆದರೆ ಆಟೋ ಚಾಲಕರು ನಮ್ಮನ್ನು ಹಿಡಿದು ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಬೈಕ್ ಸವಾರರು ಹಾಗೂ ಟ್ಯಾಕ್ಸಿ ಚಾಲಕರು ದೂರಿದ್ದಾರೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

29/07/2022 04:50 pm

Cinque Terre

31.77 K

Cinque Terre

0

ಸಂಬಂಧಿತ ಸುದ್ದಿ