ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸದ ರಾಶಿಯಂತೆ ಬಿದ್ದ ವಿಸರ್ಜಿತ ಗಣೇಶ ಮೂರ್ತಿಗಳು; ಭಕ್ತರ ಭಾವನೆಗೆ ಧಕ್ಕೆ ತಂದ ದೊಡ್ಡಬಳ್ಳಾಪುರ ನಗರಸಭೆ.

ಗಣೇಶನ ವಿಸರ್ಜನೆಗಾಗಿ ದೊಡ್ಡಬಳ್ಳಾಪುರ ನಗರಸಭೆಯಿಂದ ಸ್ಥಳ ನಿಗಧಿ ಮಾಡಲಾಗಿತ್ತು, ನಗರಸಭೆಯ ಕ್ರಮಕ್ಕೆ ಬೆಲೆಕೊಟ್ಟ ಭಕ್ತರು ನಿಗಧಿತ ಸ್ಥಳದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದ್ದಾರೆ. ಆದ್ರೆ ವಿಸರ್ಜನಾ ಸ್ಥಳದಲ್ಲಿ ಕಸದ ರಾಶಿಯಂತೆ ಅರ್ಧಂಬರ್ಧ ನೀರಿನಲ್ಲಿ ಕರಗಿದ ಗಣೇಶನ ಮೂರ್ತಿಗಳು ಬಿದ್ದಿದ್ದು, ನಗರಸಭೆಯ ನಿರ್ಲಕ್ಷ್ಯತೆ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ದೊಡ್ಡಬಳ್ಳಾಪುರ ನಗರಸಭೆಯ ಈ ವರ್ತನೆ ಹಿಂದೂ ಸಂಘಟನೆಗಳ ಅಕ್ರೋಶಕ್ಕೆ ಕಾರಣವಾಗಿದೆ.

ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಮತ್ತು ಕೆರೆಯ ಸ್ವಚ್ಛತೆಯನ್ನ ಕಾಪಾಡಲು ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಾಗರಕೆರೆ ಪಕ್ಕದಲ್ಲಿ ವಿಸರ್ಜನಾ ಸ್ಥಳವನ್ನ ನಿರ್ಮಾಣ ಮಾಡಿತು. ಆ ಸ್ಥಳದಲ್ಲೇ ಭಕ್ತರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದ್ರು. ಗಣೇಶೋತ್ಸವ ಮುಗಿದು ಒಂದು ತಿಂಗಳಾಗಿದೆ. ವಿಸರ್ಜನಾ ಸ್ಥಳದಲ್ಲಿ ಅರ್ಧಂಬರ್ಧ ನೀರಿನಲ್ಲಿ ಕರಗಿದ ಗಣೇಶ ಮೂರ್ತಿಗಳು ಕಸದಂತೆ ಬಿದ್ದಿವೆ. ರಸ್ತೆಯ ಪಕ್ಕದಲ್ಲಿಯೇ ಕಸದಂತೆ ಬಿದ್ದಿರುವ ಗಣೇಶ ಮೂರ್ತಿಗಳು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ಗಣೇಶ ಮೂರ್ತಿಗಳನ್ನ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡ ಬೇಕಾದ ನಗರಸಭೆ ಗಾಢ ನಿದ್ದೆಯಲ್ಲಿ ಮಲಗಿದೆ. ನಗರಸಭೆಯ ನಿರ್ಲಕ್ಷ್ಯತೆಗೆ ಬೇಸತ್ತ ಹಿಂದೂ ಸಂಘಟನೆಗಳು ಭಕ್ತರ ಭಾವನೆಗಳಿಗೆ ಬೆಲೆಕೊಟ್ಟು ವಿಲೇವಾರಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.

Edited By :
PublicNext

PublicNext

29/09/2022 07:40 pm

Cinque Terre

37.78 K

Cinque Terre

0

ಸಂಬಂಧಿತ ಸುದ್ದಿ