ನವರಾತ್ರಿಯ ಸಂಭ್ರಮ ಸಿಲಿಕಾನ್ ಸಿಟಿಯಲ್ಲಿ ಕೂಡ ಜೋರಾಗಿದೆ. ನಾಡಹಬ್ಬ ದಸರಾವನ್ನು ನಗರದ ಮನೆಮನೆಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಗೊಂಬೆಗಳನ್ನು ಕೂರಿಸಿ ಅದ್ಧೂರಿಯಾಗಿ ನಾಡಹಬ್ಬ ದಸರಾ ಆಚರಿಸಲಾಗುವುದು. ಒಂದಡೆ ಪಾರ್ಕ್, ಒಂದೆಡೆ ಹಳ್ಳಿಯ ಸೊಗಡು ಇನ್ನೊಂದು ಕಡೆ, ಸಾಲುಸಾಲಾಗಿ ಕೂರಿಸಿರುವ ಒಂದೊಂದು ಬೊಂಬೆಗಳು ಕೂಡ ಒಂದೊಂದು ಕತೆ ಹೇಳುವುದು.
ದಶಾವತಾರ, ರಾಜ ರಾಣಿ, ದುರ್ಗಾಪರಮೇಶ್ವರಿ, ದೇವಸ್ಥಾನದ ಗೋಪುರ, ಗಂಡು-ಹೆಣ್ಣಿನ ಮದುವೆ, ಅನಂತಪದ್ಮನಾಭ ಅಬ್ಬಬ್ಬಾ ಎಲ್ಲಾ ಆರಾಧ್ಯ ದೇವರುಗಳ ಅನಾವರಣ ಅಂದ್ರೆ ಇದೇ ಇರಬೇಕು. ಬೆಂಗಳೂರಿನ ಬಿಟಿಎಂ ಲೇಔಟ್ನ ಮಂಜುಳರವರ ಕುಟುಂಬವು 45 ವರ್ಷಗಳಿಂದ ತಮ್ಮ ಮನೆಯಲ್ಲಿ ಹೀಗೆ ದಸರಾ ಗೊಂಬೆ ಕೂರಿಸುತ್ತಾರೆ.
ಮಂಜುಳಾರವರು ನವರಾತ್ರಿಯ ಒಂಬತ್ತು ದಿನಗಳು ಮನೆಯಲ್ಲಿ ದಸರಾ ಬೊಂಬೆಗಳಿಗೆ ಪೂಜೆ ಮಾಡಿ ಬೊಂಬೆ ನೋಡಲು ಬರುವ ಅಕ್ಕಪಕ್ಕದವರಿಗೆ ಸಿಹಿ ಹಂಚಿ ಬೊಂಬೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆಚರಣೆಗಳೆ ಅರ್ಥ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಮಂಜುಳಾ ಅವರು ಬೊಂಬೆ ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದಾರೆ ಇವರ ಬೊಂಬೆ ಪ್ರೀತಿ ಎಲ್ಲರೂ ಮೆಚ್ಚುವಂತದ್ದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
27/09/2022 11:40 am