ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ

ನಗರದಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ವಾರದಲ್ಲಿ ಒಂದು ಕಡೆಯಾದರೂ ನಾಯಿಗಳಿಂದ ಬೇಸತ್ತ ಬಗ್ಗೆ, ಗಾಯಗೊಂಡ ಬಗ್ಗೆ, ಆಸ್ಪತ್ರೆಗೆ ದಾಖಲಾದ ಬಗ್ಗೆ, ವರದಿಗಳು ಹೆಚ್ಚಾಗುತ್ತಿವೆ.

ಬೀದಿ ನಾಯಿಗಳ ಹಾವಳಿಗೆ ಜನರಂತೂ ಭಯಭೀತಗೊಂಡು ಪ್ರಾಣ ಭಯದಲ್ಲೇ ಬದುಕುವಂತಾಗಿದೆ. ನಗರದಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿವೆ. ನಾಯಿ ಅಡ್ಡ ಬಂದು ಬಹಳಷ್ಟು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ರಾತ್ರಿ ವೇಳೆ ಒಂಟಿಯಾಗಿ ಹೋಗುವವರ ಮೇಲೆ ಹಿಂಡು ಹಿಂಡಾಗಿ ದಾಳಿ ನಡೆಸುತ್ತಿವೆ. ನಾಯಿಗಳ ಹಾವಳಿಯಿಂದ ತಪ್ಪಿಸಿಕೊಂಡು ಪಾರಾಗುವುದೇ ಒಂದು ಹರಸಾಹಸದ ಕೆಲಸವಾಗಿದೆ.

ಬೀದಿ ನಾಯಿಗಳು ಯಾವಾಗ ಹೇಗೆ ದಾಳಿ ಮಾಡುತ್ತವೆ ಅಂತಾ ಗೊತ್ತಾಗುವುದೇ ಇಲ್ಲ, ನಾಯಿಗಳು ಮಿತಿಮೀರಿದ್ದರಿಂದ ಜನ ಭಯಭೀತಗೊಂಡಿದ್ದು ನಾಯಿಗಳ ಹಾವಳಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ನಗರದ ಯಾವುದೇ ವಾರ್ಡ್ ಗೆ ಹೋದರೂ ನಾಯಿಗಳು ಹಿಂಡು ಹಿಂಡಾಗಿ ಬರುತ್ತದೆ. ಗುಂಪು ಗುಂಪಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೆಲವು ವೇಳೆ ಶಾಲಾ ಮಕ್ಕಳ ಮೇಲೂ ದಾಳಿ ಮಾಡಿವೆ. ಮಕ್ಕಳ ಮೇಲೆ ನಾಯಿಗಳ ದಾಳಿ ನಡೆದಾಗ, ಆ ಸಂದರ್ಭದಲ್ಲಿ ಸಾರ್ವಜನಿಕರ ಕೂಗು ಎದ್ದಾಗ ದಿಢೀರ್ ಕ್ರಮದ ಭರವಸೆ ನೀಡುವುದು ಮಹಾನಗರ ಪಾಲಿಕೆಯ ಕೆಲಸವಾಗಿದೆ. ಆದ್ರೆ ಪಾಲಿಕೆ ಯಾವುದೇ ಕ್ರಮ ಜರುಗಿಸದೆ ಜಾಣ ಮೌನಕ್ಕೆ ಶರಣಾಗುತ್ತದೆ. ವರ್ಷಗಳು ಉರುಳಿ ಹೋಗುತ್ತಿವೆಯೇ ಹೊರತು ನಾಯಿಗಳ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ.

Edited By :
PublicNext

PublicNext

21/09/2022 04:31 pm

Cinque Terre

23.05 K

Cinque Terre

3