ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೈಬರ್ ಸೆಕ್ಯುರಿಟಿ: ಡೆಲ್‌ ಜತೆ ಒಡಂಬಡಿಕೆಗೆ ಸರಕಾರದ ಅಂಕಿತ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳು, ನವೋದ್ಯಮ ವಲಯ ಮತ್ತು ಸರಕಾರಿ ಕಚೇರಿಗಳಲ್ಲಿ ಸೈಬರ್ ಸೆಕ್ಯುರಿಟಿ ಕುರಿತು ಅರಿವು ಮೂಡಿಸುವ ಉದ್ದೇಶದ ಒಡಂಬಡಿಕೆಗೆ ಡೆಲ್ ಟೆಕ್ನಾಲಜೀಸ್ ಮತ್ತು ರಾಜ್ಯ ಸರಕಾರದ 'ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರ' (ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸೈಬರ್ ಸೆಕ್ಯುರಿಟಿ)ಗಳು ಐಟಿ-ಬಿಟಿ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಸೋಮವಾರ ಒಡಂಬಡಿಕೆ ಸಹಿ ಹಾಕಲಾಯಿತು.

ಬಳಿಕ ಮಾತನಾಡಿದ ಅವರು, ಈ ಒಡಂಬಡಿಕೆಯು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳು, ನವೋದ್ಯಮಗಳು ಮತ್ತು ಸರಕಾರಿ ಕಚೇರಿಗಳಿಗೆ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಕಲಿಕೆ ಸಾಧ್ಯವಾಗಲಿದೆ.

ಡೆಲ್ ಟೆಕ್ನಾಲಜೀಸ್ ಸಂಸ್ಥೆಯು ಇಷ್ಟೂ ಕ್ಷೇತ್ರಗಳಿಗೆ ತನ್ನ ಇಂಟರ್- ಆಕ್ಟೀವ್ ಕೋರ್ಸ್‌ಗಳನ್ನು ಒದಗಿಸಲಿದೆ. ವಿದ್ಯಾರ್ಥಿಗಳ ಪ್ರಯೋಜನಕ್ಕೆ ರೂಪಿಸಿರುವ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ವಸ್ತುವಿಷಯಗಳು ಇಂಗ್ಲೀಷ್‌ನ ಜೊತೆಗೆ ಕನ್ನಡದಲ್ಲೂ ಇರಲಿವೆ ಎಂದರು. ರಾಜ್ಯವು 2025ರ ಹೊತ್ತಿಗೆ 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿ ಹೊಂದಿದೆ ಎಂದರು.

Edited By :
PublicNext

PublicNext

12/09/2022 08:44 pm

Cinque Terre

32.5 K

Cinque Terre

0

ಸಂಬಂಧಿತ ಸುದ್ದಿ