ಯಲಹಂಕ: ನೀರಾವರಿ ಮೂಲಗಳಿಲ್ಲದೆ ಮನುಷ್ಯನ ಅಸ್ತಿತ್ವ ಇಲ್ಲ. ಎಲ್ಲಾ ನಾಗರಿಕತೆ ನಡೆದಿರೋದು ನೀರಿನ ಮೂಲ ನದಿ-ಕೆರೆ ಪಾತ್ರಗಳಲ್ಲಿ. ಮನುಷ್ಯ ಸ್ವಾರ್ಥಕ್ಕೆ ಬಿದ್ದು ಕೆರೆ, ರಾಜಕಾಲುವೆ ನುಂಗಿದ ಪರಿಣಾಮ ಏನೆಲ್ಲಾ ಅನಾಹುತ ಆಗಿವೆ ಗೊತ್ತಿದೆ. ಇದಕ್ಕೆ ಭಿನ್ನವಾಗಿ ಬೆಂಗಳೂರಿನ ಯಲಹಂಕದ ಕಡತನಮಲೆ ಗ್ರಾಮಸ್ಥರು ಲಕ್ಷಾಂತರ ಖರ್ಚು ಮಾಡಿದ ಕೆರೆ ಈಗ ಮೈತುಂಬಿ ಕೋಡಿ ಬಿದ್ದಿದೆ. ಸದ್ಯ ಕೆರೆಯಲ್ಲಿ ಜಂಬು ಕಳೆ ಬಿದ್ದ ಕಾರಣ ಜನರೇ ಮತ್ತೆ ಪುನಃಚೇತನಕ್ಕೆ ಕೈಹಾಕಿದ್ದಾರೆ.
ಕೊರೊನಾ ಲಾಕ್ ಡೌನ್ ವೇಳೆ ಕಡತನಮಲೆ ಗ್ರಾಮಸ್ಥರು ಒಂದೊಳ್ಳೆ ಕೆಲಸಕ್ಕೆ ಮುಂದಾದರು. ಹೂಳು ತುಂಬಿದ್ದ 57ಎಕರೆ ವಿಸ್ತೀರ್ಣದ ಕಡತನಮಲೆ ಕೆರೆನ ಗ್ರಾಮಸ್ಥರೇ 60 ಲಕ್ಷ ರೂ. ಸಂಗ್ರಹಿಸಿ ಜೀರ್ಣೋದ್ಧಾರ ಮಾಡಿದ್ರು! ಕೆರೆ ಅಂಗಳದಲ್ಲಿ 15000 ಗಿಡ ನೆಟ್ಟು ಪರಿಸರ ಕಾಳಜಿ ತೋರಿದ್ದರು.
ಯಾವಾಗ ಗ್ರಾಮಸ್ಥರೇ ಸರ್ಕಾರದ ನೆರವಿಲ್ಲದೆ ಜೀರ್ಣೋದ್ಧಾರ ಮಾಡಿದರೊ ಸ್ಥಳೀಯ ಶಾಸಕ ವಿಶ್ವನಾಥ್ ಕೈಜೋಡಿಸಿದರು. ಮೊದಲ ವರ್ಷದಲ್ಲೇ ಕೋಡಿ ಬಿದ್ದ ಕೆರೆಲಿ ಈಗ ಜಂಡು, ಕಳೆ ತುಂಬಿಕೊಂಡು ಕಳೆಗುಂದಿತ್ತು. ಪರಿಣಾಮ ಗ್ರಾಮಸ್ಥರು ಮತ್ತು ಸ್ವಯಂ ಸೇವಕರು ಕೆರೆ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ಅವಸಾನದತ್ತ ಸಾಗಿದ್ದ ಕೆರೆನ ಜನರೇ ಪುನಶ್ಚೇತನ ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅದೃಷ್ಟ ಎಂಬಂತೆ ಮೊದಲ ವರ್ಷದಲ್ಲೇ ಕೆರೆ ಕೋಡಿ ಬಿದ್ದು ಕೆರೆ ಹಬ್ಬ ತೆಪ್ಪೋತ್ಸವ ಮಾಡುವ ಗ್ರಾಮಸ್ಥರ ಕನಸು ನನಸಾಗಲಿ.
PublicNext
28/09/2022 10:22 am