ಟಿ.ದಾಸರಹಳ್ಳಿ: ವಿಜಯದಶಮಿ ದಿನವಾದ ಇಂದು ಬೆಂಗಳೂರು ಹೆಸರಘಟ್ಟರಸ್ತೆಯ ಮಲ್ಲಸಂದ್ರ ಶ್ರೀರಾಜ ಮಾತಾ ಉಚ್ಚಂಗಿ ದೇವಾಲಯದ ಮುಖ್ಯದ್ವಾರ ಬಳಿ ನಾಗರಹಾವೊಂದು ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತನ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ನಡೆದಿದೆ!
ಹಾವು ಕಚ್ಚಲು ತನ್ನ ಮೇಲೆರಗಿದ ವೇಳೆ ಕ್ಷಣ ಮಾತ್ರದಲ್ಲಿ ಸರ್ಪದ ಪ್ರಹಾರದಿಂದ ಆ ಭಕ್ತ ಪಾರಾಗಿದ್ದಾನೆ! ನಾಗರ ಅಟ್ಯಾಕ್ ಮಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
-ಸುಮಿತ್ರ, ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
Kshetra Samachara
05/10/2022 08:23 pm