ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ PFI ಮುಖಂಡರ ಮನೆ ಮೇಲೆ ಪೊಲೀಸ್‌ ದಾಳಿ

ದೊಡ್ಡಬಳ್ಳಾಪುರ: ರಾಜ್ಯಾದ್ಯಂತ ಪೊಲೀಸರು ಏಕ ಕಾಲದಲ್ಲಿ ಇಂದು PFI ನಾಯಕರು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 9 ಜನರನ್ನ ವಶಕ್ಕೆ ಪಡೆದಿದ್ದಾರೆ.

ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪೊಲೀಸರು ದಾಳಿ ನಡೆಸಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸರು PFI ಸಂಘಟನೆಗಳಲ್ಲಿ ತೊಡಗಿದ್ದ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ವಿಜಯಪುರ, ಹೊಸಕೋಟೆ ಸೇರಿದಂತೆ ಒಟ್ಟು 9 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ತನಿಖಾ ದಳ (NIA) ರಾಜ್ಯದಲ್ಲಿನ SDPI ಮತ್ತು PFI ಮುಖಂಡರ ಮನೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಈ ವೇಳೆ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇವರ ಮೇಲೆ ಅನುಮಾನಗಳು ಉಂಟಾದ ಹಿನ್ನಲೆ ರಾಜ್ಯ ಪೊಲೀಸರು ಇಂದು ಹಲವು ಜಿಲ್ಲೆಗಳಲ್ಲಿ PFI ಮುಖಂಡರ ಮನೆ ಮೇಲೆ ದಾಳಿ ನಡೆಸಿ 40 ಜನರನ್ನು ವಶಕ್ಕೆ ಪಡೆದಿದ್ದಾರೆ.

Edited By : Vijay Kumar
Kshetra Samachara

Kshetra Samachara

27/09/2022 09:51 am

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ