ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀನಿವಾಸ್ ಚಂದ್ರ
ಬೆಂಗಳೂರು: ಅನಾದಿ ಕಾಲದಿಂದಲೂ ಪೊಲೀಸ್ ಇಲಾಖೆಯಲ್ಲಿ ಒಂದು ರೀತಿಯ ಗುಲಾಮ ಪದ್ದತಿ ಇದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಇಲಾಖೆಯಲ್ಲ ರಾತ್ರಿ ಹಗಲು ಕೆಲಾ ಮಾಡೋ ಅಧಿಕಾರಿಗಳಿಗೆ ಒಂದು ನ್ಯಾಯ ಮೇಲಾಧಿಕಾರಿಗಳಿಗೆ ಒಂದು ನ್ಯಾಯ. ಮುಂಬಡ್ತಿ ವಿಚಾರದಲ್ಲಿ ಇಲಾಖೆಯಲ್ಲಿ ಆಗ್ತಿರೋ ತಾರತಮ್ಯಕ್ಕೆ ಕಡಿವಾಣ ಹಾಕವ ಕೆಲಸಕ್ಕೆ ಸರ್ಕಾರ ಮುಂದಾಗ ಬೇಕು. ಯಾಕಂದ್ರೆ ದಶಕಗಳ ಸೇವೆ ಸಲ್ಲಿಸಿದ್ರೂ ಪೊಲೀಸ್ರಿಗೆ ಸರಿಯಾದ ಮುಂಬಡ್ತಿ ಸಿಕ್ತಿಲ್ಲ. ಇದಕ್ಕೆಲ್ಲ ಮೂಲ ಕಾರಣ ಇಲಾಖೆಯಲ್ಲಿನ ಅಧಿಕಾರ ಅಸಮತೋಲನ.
ರಾಜ್ಯದಲ್ಲಿ ಐಪಿಎಸ್ ಹುದ್ದೆಯ ಎಸ್ಪಿ/ಡಿಸಿಪಿ ರ‍್ಯಾಂಕ್ ಅಧಿಕಾರಿಯಿಂದ ಹಿಡಿದು ಡಿಜಿಪಿ ವರೆಗೂ 145 ಐಪಿಎಸ್ ಹುದ್ದೆಗಳಿವೆ. ಇದ್ರಲ್ಲಿ 40% ಐಪಿಎಸ್ ಅಧಿಕಾರಿಗಳು ಕೇಂದ್ರ ಸರ್ಕಾರ ಕರ್ತವ್ಯಕ್ಕೆ ಐದು ವರ್ಷ ನಿಯೋಜನೆಯಾಗಬೇಕು. ಈ ನಿಯಮವನ್ನ ಐಪಿಎಸ್ ವಲಯದಲ್ಲೂ ಬಹುತೇಕ ಅಧಿಕಾರಿಗಳು ಪಾಲನೆ ಮಾಡದೇ ಇರೋದು ಈ ಅಧಿಕಾರ ಅಸಮತೋಲನಕ್ಕೆ ಪ್ರಮುಖ ಕಾರಣ.
ಯಾಕಂದ್ರೆ ಪಿಎಸ್ ಐನಿಂದ ಪದನ್ನೊತ್ತಿಗೊಂಡ ನಾನ್ ಐಪಿಎಸ್ ರ‍್ಯಾಂಕ್ 110 ಎಸ್ಪಿ ಹುದ್ದೆ ರಾಜ್ಯದಲ್ಲಿದ್ದು. ಇದ್ರಲ್ಲಿ ಸುಮಾರು 43 ಹುದ್ದೆಗಳಲ್ಲಿ ಐಪಿಎಸ್ ಅಧಿಕಾರಿಗಳೇ ಕಾರ್ಯನಿರ್ವಹಿಸ್ತಿದ್ದಾರೆ. ಇನ್ನೂ ಇವ್ರ ಜೊತೆಗೆ ಸಿಐಡಿ ಎಸ್ಪಿಗಳು ಐವರು ಹಾಗೂ ಆರ್ ಎಸ್ ಐ ಎಸ್ಪಿಗಳೂ ಸೇರಿಕೊಂಡಿದ್ದಾರೆ.
ಇನ್ನೂ ಮುಖ್ಯವಾಗಿ ಒಬ್ಬ ಐಪಿಎಸ್ ಅಧಿಕಾರಿ ನೇಮಕವಾದ ದಿನವೇ ಮುಂದಿನ ಅಷ್ಟೂ ಪ್ರಮೋಷನ್ ಗಳ ದಿನಾಂಕ ಇಷ್ಟೇ ವರ್ಷಕ್ಕೆ ಎಂದು ನಿಗದಿಯಾಗಿರುತ್ತೆ. ಆದ್ರೆ ಪಿಎಸ್ ಐ ಆಗಿ ನೇಮಕಾತಿಯಾಗೋ ಅಧಿಕಾರಿಗೆ ಇಂತಿಷ್ಟೇ ವರ್ಷಕ್ಕೆ ಪ್ರಮೋಷನ್ ಕೊಡಬೇಕು ಅಂತ ಇದ್ರೂ ಸರ್ಕಾರ ಅದನ್ನ ಮಾಡ್ತಿಲ್ಲ. ಇನ್ನೂ ಪ್ರಮೋಷನ್ ವರ್ಷಕ್ಕೆ ಇಂಕ್ರಿಮೆಂಟ್ ಕೊಡುವ ಸರ್ಕಾರ ಪ್ರಮೋಷನ್ ಮಾತ್ರ ಕೊಡಲ್ಲ.
ಇನ್ನೂ ಐ ಪಿಎಸ್ ಅಧಿಕಾರಿ ವರ್ಗದಲ್ಲಿ ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ಹುದ್ದೆಯ ದರ್ಜೆಯನ್ನ ಮೇಲ್ದರ್ಜೆ ಅಥವಾ ಕೆಳ ದರ್ಜೆಗೆ ಇಳಿಸಿ ಅಧಿಕಾರಿಗಳಿಗೆ ಜಾಗ ಮಾಡಿ ಕೊಡ್ತಿದ್ದಾರೆ. ಅದೇ ಕೆಲಸವನ್ನ ಇನ್ಸ್ಪೆಕ್ಟರ್ ನಿಂದ ಪ್ರಮೋಷನ್ ಆಗಬೇಕಾದ ಅಧಿಕಾರಿಗೂ ಡಿವೈಎಸ್ ಪಿಯಾಗಿ ಪ್ರಮೋಷನ್ ಮಾಡಿ ಸ್ಟೇಷನ್ ಇಂಚಾರ್ಜ್ ಮಾಡಬಹುದು ಆದ್ರೆ ಸರ್ಕಾರ ಮಾತ್ರ ಈ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಇಬ್ಬಗೆ ನೀತಿ ಅನುಸರಿಸಿ ಮಲತಾಯಿ ಧೋರಣೆ ತೋರುತ್ತಿದೆ.
ಇನ್ನೂ ಕೇಂದ್ರ ಸರ್ಕಾರ ಕೂಡ ಈ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಕರ್ನಾಟಕದ ಐ ಪಿಎಸ್ ಅಧಿಕಾರಿಗಳು ಕೇಂದ್ರ ಇಲಾಖೆಯ ಕರ್ತವ್ಯ ಬರಲು ಆಸಕ್ತಿ ತೋರ್ತಿಲ್ಲ ಅಂತ ಇದ್ರಿಂದ ಅನೇಕ ಹುದ್ದೆಗಳು ಖಾಲಿ ಇವೆ ಅಂತ ಪತ್ರ ಬರೆದಿದ್ರೂ.
ಇನ್ನಾದ್ರೂ ಸರ್ಕಾರ ಈ ಇಬ್ಬಗೆ ನೀತಿ ತಿಲಾಂಜಲಿ ಹಾಡಿ ಅಧಿಕಾರಿಗಳಿಗೆ ಸಿಗಬೇಕಾದ ಪ್ರಮೋಷನ್ ಕಲ್ಪಿಸಿಕೊಡುವತ್ತ ಕೆಲಸ ಮಾಡಬೇಕು ಎನ್ನುವುದೆ ಪಬ್ಲಿಕ್ ನೆಕ್ಸ್ಟ್ ಆಶಯ.
PublicNext
23/09/2022 10:34 pm