", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/222042-1737729586-Add-a-heading---2025-01-24T200859.622.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಮತ್ತೆರಡು ಪೊಲೀಸ್ ಠಾಣೆಗಳು ಸೇರ್ಪಡೆಯಾಗಲಿವೆ. ಸರ್ಕಾರದ ಅಧಿಕೃತ ...Read more" } ", "keywords": "Bengaluru police, commissionerate, Aavalahalli police station, Hebbagodi police station, police jurisdiction, Karnataka police, law and order, Bengaluru city police. ,Bangalore,Bangalore-Rural,Law-and-Order,Government", "url": "https://publicnext.com/article/nid/Bangalore/Bangalore-Rural/Law-and-Order/Government" } ಬೆಂಗಳೂರು: ಆವಲಹಳ್ಳಿ, ಹೆಬ್ಬಗೋಡಿ ಪೊಲೀಸ್ ಠಾಣೆಗಳನ್ನು ಕಮಿಷನರೇಟ್ ವ್ಯಾಪ್ತಿಗೆ ಸೇರಿಸಲು ಪ್ರಸ್ತಾವನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆವಲಹಳ್ಳಿ, ಹೆಬ್ಬಗೋಡಿ ಪೊಲೀಸ್ ಠಾಣೆಗಳನ್ನು ಕಮಿಷನರೇಟ್ ವ್ಯಾಪ್ತಿಗೆ ಸೇರಿಸಲು ಪ್ರಸ್ತಾವನೆ

ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಮತ್ತೆರಡು ಪೊಲೀಸ್ ಠಾಣೆಗಳು ಸೇರ್ಪಡೆಯಾಗಲಿವೆ. ಸರ್ಕಾರದ ಅಧಿಕೃತ ಆದೇಶ ಇನ್ನಷ್ಟೇ ಹೊರಡಿಸಬೇಕಿದೆ. ಸರ್ಕಾರ ಅನುಮತಿ ನೀಡಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀನದಲ್ಲಿರುವ ಹೆಬ್ಬಗೋಡಿ ಹಾಗೂ ಆವಲಹಳ್ಳಿ ಪೊಲೀಸ್ ಠಾಣೆಗಳು ಇನ್ನುಮುಂದೆ ನಗರದ ವ್ಯಾಪ್ತಿಗೆ ಬರಲಿವೆ.

ನಗರೀಕರಣ ಪ್ರಭಾವದಿಂದ ಜನಸಂಖ್ಯೆ ಅಧಿಕಗೊಂಡಂತೆ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಕಾರಣಗಳಿಂದ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಸೇರಿಸಬೇಕೆಂದು ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಅನುಮತಿ ದೊರೆಯುವ ಸಾಧ್ಯತೆಯಿದೆ. ಒಂದು ವೇಳೆ ಸರ್ಕಾರವು ಅನುಮೋದಿಸಿದರೆ ಹೊಸಕೋಟೆ ಉಪವಿಭಾಗದ ಆವಲಹಳ್ಳಿ ಹಾಗೂ ಅನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಗಳು ಕ್ರಮವಾಗಿ ವೈಟ್ ಫೀಲ್ಡ್ ಹಾಗೂ ಆಗ್ನೇಯ ವಿಭಾಗಗಳ ವ್ಯಾಪ್ತಿಗೆ ಬರಲಿವೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದೆ.

ಬೆಂಗಳೂರು ನಗರದ ಸನಿಹದಲ್ಲಿರು ಈ ಎರಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಗರೀಕರಣ ದೆಸೆಯಿಂದ ಜನಸಂಖ್ಯೆ ಅಧಿಕವಾಗಿದೆ. ಇದರ ಪರಿಣಾಮ ಅಪರಾಧಗಳು ಹೆಚ್ಚಾಗುತ್ತಿವೆ. ವಾಹನ ಸಂಚಾರದಿಂದ ಸಂಚಾರ ದಟ್ಟಣೆ ದಿನೇ ದಿನೇ ಏರಿಕೆಯಾಗುತ್ತಿದೆ. ಅಪರಾಧ ಪ್ರಕರಣಗಳ ಮೇಲೆ ನಿಗಾ ವಹಿಸಿ ಸುಗಮ ವಾಹನ ಸಂಚಾರ ಸೇರಿದಂತೆ ಆಡಳಿತಾತ್ಮಕ ಕಾರಣಗಳಿಗಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಡಿಜಿಪಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪರಿಶೀಲನೆ ನಡೆಸಿ ಸರ್ಕಾರವು ಇನ್ನಷ್ಟೇ ಅನುಮೋದನೆ ನೀಡಬೇಕಿದೆ. ಈ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯನ್ನ ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯಿಂದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಸೇರ್ಪಡೆಯಾಗಿತ್ತು.

Edited By : Vijay Kumar
PublicNext

PublicNext

24/01/2025 08:09 pm

Cinque Terre

23.74 K

Cinque Terre

0