ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಕೋಲಾರ ರಸ್ತೆ ಕಾಟಂನಲ್ಲೂರು ಜಂಕ್ಷನ್ ಇದೀಗ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗಿದೆ. ಇಂದು ಸಂಜೆ 4-30ಕ್ಕೆ ಸಂಭವಿಸಿದ ಸ್ಕೂಲ್ ಬಸ್ ಮತ್ತು ಲಾರಿ ನಡುವೆ ಅಪಘಾತವಾಗಿ, ನಡೆದ ಸಣ್ಣ ಜಗಳ ಒಂದು ಗಂಟೆಯ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.
ಹೊಸಕೋಟೆ ಟೋಲ್ ಸಮೀಪದ ಕಾಟಂನಲ್ಲೂರು ಜಂಕ್ಷನ್ ಮೂಲಕವೇ ಕಾಡುಗುಡಿ, ಓ ಫಾರಂ, ಐಟಿಪಿಎಲ್- ಕಡೆಗೆ ಹಾಗು ಹೊಸಕೋಟೆ ಕೃಷ್ಣರಾಜಪುರ ಕಡೆಯಿಂದ ಬೆಂಗಳೂರು ಕಡೆಗೆ ಈ ಕಾಟಂನಲ್ಲೂರು ಜಂಕ್ಷನ್ ನಿಂದ ಸಾವಿರಾರು ವಾಹನ ಬಂದು ಹೋಗಬೇಕಿದೆ.
ಒಂದ್ಸಲ ಈ ಜಂಕ್ಷನ್ ಜಾಮ್ ಆದ್ರೆ 2ರಿಂದ 3ಕಿ.ಮೀ. ಜಾಮ್ ಆಗಿ ಜನ ಗಂಟೆಗಟ್ಟಲೆ ಪರದಾಡಬೇಕಿದೆ. ಈ ಎಲ್ಲಾ ಸಮಸ್ಯೆ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ವರದಿ ಇಲ್ಲಿದೆ ನೋಡಿ..
PublicNext
13/10/2022 08:29 pm