ಬೆಂಗಳೂರು: ಆ್ಯಪ್ ಆಧಾರಿತ ಕ್ಯಾಬ್‌ಗಳು ಪ್ರಯಾಣಿಕರಿಂದ ನಿಯಮ ಮೀರಿ ಹಣ ವಸೂಲಿ ಮಾಡುತ್ತಿವೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಸಾರಿಗೆ ಇಲಾಖೆ ಅಧಿಕಾರಿಗಳು ಓಲಾ, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಸಂಸ್ಥೆಗಳಿಗೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ಓಲಾ, ಉಬರ್ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ.
ಈ ಮೊದಲು 2 ಕಿ.ಮೀ. ಗಿಂತ ಕಡಿಮೆ ದೂರ ಕ್ರಮಿಸಲು ಆಟೋಗಳು 100 ರೂ. ಮೊತ್ತ ತೋರಿಸುತ್ತಿತ್ತು. ಆದರೆ ಈಗ ಸರ್ಕಾರದ ಕ್ರಮಕ್ಕೆ ಮುಂದಾದ ಬಳಿಕ ಬರೋಬ್ಬರಿ 20-40 ರೂ.ಗಳಷ್ಟು ಬೆಲೆ ಇಳಿಕೆ ಮಾಡಲಾಗಿದೆ. ಉದಾಹರಣೆಗೆ ಮೊದಲು 100 ರೂ. ತೋರಿಸುತ್ತಿದ್ದ ತಾಣಕ್ಕೆ ಈಗ 80 ರಿಂದ 60 ರೂ.ವರೆಗೆ ತೋರಿಸುತ್ತಿದೆ. ಇದರಿಂದ ಆಪ್ ಆಧಾರಿತ ಆಟೋ ರಿಕ್ಷಾ ಬಳಕೆದಾರರು ಸಮಾಧಾನಪಡುವಂತಾಗಿದೆ.
PublicNext
13/10/2022 08:06 pm