ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯೋಧನ ಮನೆಬಾಗಿಲಿಗೆ ಬಂದು ನಿವೇಶನದ ಹಕ್ಕು ಪತ್ರ ನೀಡಿದ ಶಾಸಕ

ದೊಡ್ಡಬಳ್ಳಾಪುರ: ದೇಶ ಕಾದ ಯೋಧನ ಸೇವೆ ಪರಿಗಣಿಸಿ ಆತನ ಮನೆ ಬಾಗಿಲಿಗೆ ಬಂದು ನಿವೇಶನದ ಹಕ್ಕು ಪತ್ರವನ್ನ ಶಾಸಕ ನಿಸರ್ಗ ನಾರಾಯಣ ಸ್ವಾಮಿ ವಿತರಣೆ ಮಾಡಿದರು.

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಸಿಆರ್‌ಪಿಎಫ್ ಯೋಧ ಅನಂತ ರಾಜಗೋಪಾಲ್, 2003 ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಸೇರಿದ ಅವರು 20 ವರ್ಷ ಯೋಧನಾಗಿ ದೇಶ ಸೇವೆ ಮಾಡಿದ್ದಾರೆ. ಸದ್ಯ ಬಿಹಾರದ ಗಯಾದಲ್ಲಿ ಕೋಬ್ರಾ ಕಮಾಂಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಯೋಧನ ಸೇವೆಯನ್ನ ಪರಿಗಣಿಸಿ ಖಾಲಿ ನಿವೇಶನದವನ್ನು ತೂಬಗೆರೆ ಗ್ರಾಮ ಪಂಚಾಯತ್ ವತಿಯಿಂದ ನೀಡಲಾಗಿದೆ. ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರು ಯೋಧನ ಮನೆಗೆ ಬಂದು ಸನ್ಮಾನಿಸಿ ಹಕ್ಕು ಪತ್ರ ವಿತರಣೆ ಮಾಡಿದರು.

ಇದೇ ವೇಳೆ ಮಾತನಾಡಿದ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಪ್ರತಿಯೊಬ್ಬ ಯೋಧ ಈ ದೇಶದ ಹೆಮ್ಮೆ, ಯೋಧರನ್ನು ಗೌರವಿಸಿ ಸತ್ಕರಿಸಬೇಕಿರೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಅವರ ಕಾಳಜಿಯಿಂದ ಒಂದು ಸಾವಿರ ನಿವೇಶನಗಳ ಹಕ್ಕು ಪತ್ರ ವಿತರಣೆಗೆ ಚಾಲನೆ ಸಿಕ್ಕಿದೆ, ನಿವೇಶನಕ್ಕಾಗಿ ತಾಲೂಕಿನ 26 ಎಕರೆ ಜಮೀನು ಸರ್ವೆ ಮತ್ತು ಬಡಾವಣೆ ನಕ್ಷೆ ಮಾಡಿಕೊಟ್ಟಿದ್ದು, ಹಂತ ಹಂತವಾಗಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು.

Edited By : Somashekar
PublicNext

PublicNext

23/09/2022 12:19 pm

Cinque Terre

27.64 K

Cinque Terre

0

ಸಂಬಂಧಿತ ಸುದ್ದಿ