ದೊಡ್ಡಬಳ್ಳಾಪುರ: ಯೋಗ ಫೆಡರೇಷನ್ ಆಫ್ ಇಂಡಿಯಾದಿಂದ ನಡೆದ ಯೋಗ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಜಾಹ್ನವಿ ಎರಡನೇ ಬಾರಿಗೆ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರ ಯೋಗಪಟುಗಳ ತವರೂರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯೋಗಪಟುಗಳು ದೊಡ್ಡಬಳ್ಳಾಪುರಕ್ಕೆ ಹೆಸರು ತಂದಿದ್ದಾರೆ. ಈಗ ಇವರ ಸಾಲಿಗೆ ಜಾಹ್ನವಿ ಎಂ.ಆರ್ ಸೇರ್ಪಡೆಯಾಗಿದ್ದಾರೆ. ಶಾಂತಿನಗರದ ರವಿಕುಮಾರ್ ಮತ್ತು ರತ್ನ ದಂಪತಿಯ ಪುತ್ರಿ ಜಾಹ್ನವಿ ಕಳೆದ 7 ವರ್ಷಗಳಿಂದ ಯೋಗ ಕಲಿಯುತ್ತಿದ್ದಾರೆ.
ಎಂ.ಎಸ್.ವಿ ಪಬ್ಲಿಕ್ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜಾಹ್ನವಿ ಓದಿನ ಜೊತೆ ಯೋಗ ಕಲಿಯುತ್ತಿದ್ದಾರೆ. ನಿಸರ್ಗ ಯೋಗ ಕೇಂದ್ರದಲ್ಲಿನ ಯೋಗ ಗುರು ನಟರಾಜ್ ಅವರ ಮಾರ್ಗದರ್ಶನದಲ್ಲಿ ಯೋಗಪಟುಗಳನ್ನ ಕರಗತ ಮಾಡಿಕೊಂಡಿದ್ದಾರೆ. ಈಗಾಗಲೇ ರಾಜ್ಯ ಮತ್ತ ರಾಷ್ಟ್ರೀಯ ಯೋಗಸ್ವರ್ಥೆಗಳಲ್ಲಿ ಪ್ರಶಸ್ತಿ ಗೆದ್ದಿರುವ ಜಾಹ್ನವಿಗೆ ಮತ್ತಷ್ಟು ಸಾಧನೆ ಮಾಡುವ ಹಂಬಲ. ಕರ್ನಾಟಕ ಸ್ಟೇಟ್ ಅಮೇಚುರ್ ಯೋಗ ಸ್ಪೋಟ್ಸ್ ಅಸೋಸಿಯೇಷನ್ ಮತ್ತು ಯೋಗ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಸೆಪ್ಟೆಂಬರ್ 3ರಿಂದ 11ರವರೆಗೆ ನಡೆದ ಅನ್ ಲೈನ್ ಯೋಗ ಸ್ಪರ್ಧೆಯಲ್ಲಿ ಜಾಹ್ನವಿ 4ನೇ ಸ್ನಾನ ಪಡೆಯುವ ಮೂಲಕ 2ನೇ ಬಾರಿ ಅಂತರರಾಷ್ಟ್ರೀಯ ಯೋಗಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
PublicNext
21/09/2022 09:40 am