ಬೆಂಗಳೂರು : ಎಸಿಬಿಯನ್ನು ಮುಚ್ಚಿದ ನಂತರ ಮತ್ತೆ ಆಕ್ಟಿವ್ ಆಗುತ್ತಾ ಕರ್ನಾಟಕ ಲೋಕಾಯುಕ್ತ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮೂಡುತ್ತಿದೆ. ಇದನ್ನ ಪುಷ್ಠೀಕರಿಸುವ ರೀತಿಯಲ್ಲಿ ಲೋಕಾಯುಕ್ತದ ಚಟುವಟಿಕೆಗಳು ಗರಿಗೆದರುತ್ತಿವೆ. ಹಿಂದಿನಂತೆ ಲೋಕಾಯುಕ್ತ ಸಂಸ್ಥೆಯು ಭ್ರಷ್ಟರ ಬೇಟೆಯಾಡಲಿ.
ಇಂದು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಘಟಕವು, ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ S.P ಶ್ರೀನಾಥ್ ಜೋಶಿರವರ ನೇತೃತ್ವದಲ್ಲಿ ದೇವನಹಳ್ಳಿಯ ಪ್ರವಾಸಿಮಂದಿರದಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಿತ್ತು. ಜನರ ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆಯಲ್ಲಿ ದೇವನಹಳ್ಳಿಯ ಜನತೆ ತಮ್ಮ ದೂರುಗಳನ್ನು ನೀಡಿದರು.
ಇಂದು ದೇವನಹಳ್ಳಿಯಲ್ಲಿ ನಡೆದ ಲೋಕಾಯುಕ್ತರ ಕುಂದುಕೊರತೆ ಸಭೆಯು ಮತ್ತೆ ಜನರಚಿತ್ತ ಲೋಕಾಯುಕ್ತದತ್ತ ಮೂಡುವಂತೆ ಮಾಡಿದೆ. Byte:- ಶ್ರೀನಾಥ್ ಜೋಶಿ, ಬೆಂಗಳೂರು ಗ್ರಾ. ಲೋಕಾಯುಕ್ತ.
PublicNext
23/09/2022 09:40 pm