ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನವರಾತ್ರಿ ಮಹೋತ್ಸವದಲ್ಲಿ ರಾಯರಿಗೆ ವಿಶೇಷ ಅಲಂಕಾರ

ಬೆಂಗಳೂರು: ನವರಾತ್ರಿ ಸಮಯದಲ್ಲಿ ಅಮ್ಮನ ದೇಗುಲಗಳನ್ನು ಅಲಂಕಾರ ಮಾಡುವುದು ಸಹಜ. ಆದರೆ ನಮ್ಮ ನಗರದಲ್ಲಿ ಅಮ್ಮನ ದೇವಸ್ಥಾನಗಳಂತೇ ರಾಘವೇಂದ್ರ ಸನ್ನಿಧಿಯನ್ನು ನವ ರಾತ್ರೋತ್ಸವ ಅಂಗವಾಗಿ ವಿಶೇಷವಾಗಿ ಅಲಂಕಾರ ಮಾಡಲಾಯಿತು. ನಗರದ ಉತ್ತರಹಳ್ಳಿಯ ಪೂರ್ಣಪ್ರಜ್ಞ ಬಡಾವಣೆಯಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯೊಳಗೆ ಮತ್ತು ಹೊರಗೆ ವಿವಿಧ ರೀತಿಯಲ್ಲಿ ಕಲರ್ ಫುಲ್ ಲೈಟಿಂಗ್‌ನೊಂದಿಗೆ ಬೃಹತ್ ಸೆಟ್ ಹಾಕುವ ಮೂಲಕ ವಿಶೇಷವಾಗಿ ಅಲಂಕಾರವನ್ನು ಮಾಡಲಾಯಿತು.

ಅಂದಹಾಗೆ ದಸರಾ ನವರಾತ್ರೋತ್ಸವ ಅಂಗವಾಗಿ ಗುರು ರಾಘವೇಂದ್ರ ದೇವಸ್ಥಾನಕ್ಕೆ ಮತ್ತು ರಾಯರಿಗೆ ವಿವಿಧ ರೀತಿಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಯಿತು. ಜೊತೆಗೆ ರಾಯರ ಹಿಂದೆ ಶ್ರೀನಿವಾಸ ಮೂರ್ತಿ ಇದ್ದು ಕಲಿಯುಗ ದೇವರು ಎಂದು ಕರಿಸಿಕೊಳ್ಳುವ ತಿರುಪತಿ ತಿಮ್ಮಪ್ಪನಿಗೆ ಗುಲಾಬಿ, ಸೇವಂತಿಗೆ, ತುಲಸಿ, ಕನಕಾಂಬರದ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಯಿತು.

ಇನ್ನೂ ನವರಾತ್ರಿ ಮಹೋತ್ಸವ ನಡೆಯುವ ಪ್ರತಿ ದಿನ ಶ್ರೀ ರಾಘವೇಂದ್ರ ಸ್ವಾಮಿ ಇದ್ದು ಭಕ್ತರು ಬಂದು ದರ್ಶನ ಪಡೆಯಬಹುದು.

Edited By : Nagesh Gaonkar
PublicNext

PublicNext

30/09/2022 10:40 pm

Cinque Terre

53.95 K

Cinque Terre

1

ಸಂಬಂಧಿತ ಸುದ್ದಿ