ಬೆಂಗಳೂರು:ಇವ್ನು ಅಂತಿಂತ ಸರಗಳ್ಳನಲ್ಲ. ಹೆಂಡತಿಗೆ ಇದ್ದ ಚಿನ್ನದಾಸೆ ಈಡೇರಿಸೋದಕ್ಕೆ ಅವ್ನು ಹಿಡಿದ ದಾರಿ ಸರಗಳ್ಳತನ. ರಾಜ್ಯದ ಮೂಲೆ ಮೂಲೆಯಲ್ಲಿ ತನ್ನ ಕೈಚಳಕ ತೋರ್ಸಿ, ಪೊಲೀಸ್ರ ಗುಂಡೇಟು ತಿಂದು ಜೈಲು ಪಾಲಾಗಿದ್ದ. ಆದ್ರೆ, ಬೇಲ್ ಮೇಲೆ ಹೊರ ಬಂದವ್ನು ತನ್ನೊಂದಿಗೆ ಮತ್ತಿಬ್ಬರನ್ನ ಹಾಕಿಕೊಂಡು ಮತ್ತೆ ಹಳೆ ಚಾಳಿ ಮುಂದುವರೆಸಿದ್ದ ಈಗ ಮತ್ತೆ ಲಕ್ಷಾಂತರ ಮೌಲ್ಯದ ಬಂಗಾರದೊಂದಿಗೆ ಪೊಲೀಸರ ಅತಿಥಿಯಾಗಿದ್ದಾನೆ.
ಅಚ್ಯುತ್ @ ಗಣಿ, ಮತ್ತೊಬ್ಬ ಸಿದ್ದರಾಜ ಹಾಗೂ ಪ್ರಸನ್ನ ಕುಮಾರ. ಈ ತ್ರಿಮೂರ್ತಿಗಳಲ್ಲಿ ಈ ಅಚ್ಯುತನೇ ಗ್ಯಾಂಗ್ ಲೀಡರ್. ಒಂದ್ ಕಾಲದಲ್ಲಿ ಇಡೀ ಬೆಂಗಳೂರಿನ ಪೊಲೀಸರ ನಿದ್ದೆಗೆಡಿಸಿದ್ದ ಕಿರಾತಕ ಈ ಅಚ್ಯುತ್ ನಾಲ್ಕು ವರ್ಷಗಳ ಹಿಂದೆ ಜ್ಞಾನಭಾರತಿ ಪೊಲೀಸರಿಂದ ಗುಂಡೇಟು ತಿಂದು ಅರೆಸ್ಟ್ ಅಗಿದ್ದ.
ಅಷ್ಟರಲ್ಲಿ ಆರೋಪಿ ಬೆಂಗಳೂರು ಸಿಟಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಕೈಚಳಕ ತೋರಿ 150 ಮಹಿಯರ ಕುತ್ತಿಗೆ ಕೈಹಾಕಿ ಸುಮಾರು ನಾಲ್ಕು ಕೆ.ಜಿ.ಯಷ್ಟು ಬಂಗಾರ ಎಗರಿಸಿದ್ದ.
ಸುಮಾರು ನಾಲ್ಕು ವರ್ಷ ಪರಪ್ಪನ ಅಗ್ರಹಾರ ಜೈಲಲ್ಲಿ ಮುದ್ದೆ ಮುರಿದಿದ್ದ ಅಚ್ಯುತ್ @ ಗಣಿ ಜೈಲಿನಲ್ಲಿ ಮರ್ಡರ್ ಕೇಸ್‌ನಲ್ಲಿ ಜೈಲು ಸೇರಿದ್ದ ಸಿದ್ಧರಾಜು ಹಾಗೂ ಪ್ರಸನ್ನನ ಸ್ನೇಹ ಮಾಡಿಕೊಂಡಿದ್ದ. ಹಾಗೆ ತನ್ನ ಜೊತೆಗೆ ಇಬ್ಬರನ್ನ ಸೇರಿಸಿಕೊಂಡ ಅಚ್ಯುತ್ ಎರಡು ತಿಂಗಳ ಹಿಂದೆಯಷ್ಟೇ ಬೇಲ್ ಮೇಲೆ ಜೈಲಿನಿಂದ ಹೊರ ಬಂದಿದ್ದು, ಮತ್ತದೆ ಹಳೆ ಚಾಳಿ ಮುಂದುವರೆಸಿದ್ದ. ಇತ್ತೀಚೆಗೆ ತುಮಕೂರಿನಲ್ಲಿ ಬೈಕ್ ಕದ್ದು, ಬೆಂಗಳೂರಿನ ಉತ್ತರ ವಿಭಾಗದಲ್ಲಿ ಸರಗಳ್ಳತನಕ್ಕಿಳಿದಿದ್ದ ಆರೋಪಿಗಳು ಬಾಗಲಗುಂಟೆ ಹಾಗೂ ನೆಲಮಂಗಲದಲ್ಲಿ ಮಹಿಳೆಯರಿಬ್ಬರಿಂದ ಸರ ಕಸಿದು ಎಸ್ಕೇಪ್ ಆಗಿದ್ರು.
ಆ ಎರಡು ಪ್ರಕರಣಗಳನ್ನ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಬಾಗಲಗುಂಟೆ ಪೊಲೀಸ್ರು ನಟೋರಿಯಸ್ ಸರಗಳ್ಳ ಅಚ್ಯುತ್ ಸೇರಿ ಆತನ ಇಬ್ಬರು ಸಹಚರರಾದ ಸಿದ್ದರಾಜು ಹಾಗೂ ಪ್ರಸನ್ನ ಕುಮಾರ್ ನನ್ನ ಬಂಧಿಸಿದ್ದಾರೆ. ಆರೋಪಿಗಳಿಂದ 5 ಲಕ್ಷ ಮೌಲ್ಯದ 100ಗ್ರಾಂ ತೂಕದ ಬಂಗಾರ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
PublicNext
10/10/2022 05:21 pm