ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

70 ಲಕ್ಷದ ವಿದೇಶಿ ಡ್ರಗ್ ಪಡೆಯುವಾಗ ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದ ಮಹಿಳೆ

ಬೆಂಗಳೂರು : ಬೆಲ್ಜಿಯಂನಿಂದ ಆಮದು ಮಾಡಿಕೊಳ್ಳಲಾಗಿದ್ದ ಎಂಡಿಎಂಎ ಪಡೆಯಲು ಮುಂದಾಗಿದ್ದ ಮಹಿಳೆಯನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ನಗರದ ಇಂಟರ್ನ್ಯಾಷನಲ್ ಸ್ಕೂಲೊಂದರ ಈಜು ತರಬೇತುದಾರಳಾಗಿರುವ ಆರೋಪಿತ ಮಹಿಳೆ ಬೆಲ್ಜಿಯಂನಿಂದ ಆಮದು ಮಾಡಿಕೊಂಡಿದ್ದ ಎಂಡಿಎಂಎ ಮಾತ್ರೆಗಳಿದ್ದ ಪಾರ್ಸಲ್ ಪಡೆಯಲು ನಿನ್ನೆ ಏರ್ ಕಾರ್ಗೋ ರಿಸೀವ್ ಸೆಂಟರ್ ಬಳಿ ಬಂದಿದ್ದಳು. ಆದರೆ ಏರ್ ಕಾರ್ಗೋ ತಪಾಸಣೆ ವೇಳೆ ಪಾರ್ಸೆಲ್ ನಲ್ಲಿ ಬರೋಬ್ಬರಿ 76.2 ಲಕ್ಷ ಮೌಲ್ಯದ 5080 ಎಂಡಿಎಂಎ ಮಾತ್ರೆಗಳಿರುವುದು ಪತ್ತೆಯಾಗಿತ್ತು.

ವಿಷಯ ತಿಳಿದು ಪರಾರಿಯಾಗಲು ಯತ್ನಿಸಿದಾಗ ಆರೋಪಿಯನ್ನ ಬೆನ್ನಟ್ಟಿದ ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಇಂದು ಆರೋಪಿಯನ್ನ ಕಸ್ಟಮ್ಸ್ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/10/2022 07:08 pm

Cinque Terre

2.42 K

Cinque Terre

0