ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಡಿತರ ಧಾನ್ಯದಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ

ದೊಡ್ಡಬಳ್ಳಾಪುರ: ಪಡಿತರ ಕಾರ್ಡ್‌ಗೆ ವಿತರಣೆಯಾದ ರೇಷನ್‌ನಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ನೀರಿನಲ್ಲಿ ಅಕ್ಕಿ ತೇಲುತ್ತಿದ್ದು ಜನ ಪ್ಲಾಸ್ಟಿಕ್ ಅಕ್ಕಿ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಚನ್ನಾಪುರದಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಪಡಿತರ ಕಾರ್ಡ್‌ಗೆ ವಿತರಣೆಯಾದ ರೇಷನ್‌ನಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರೋದು ಜನರ ಆತಂಕವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಚನ್ನಾಪುರದ ಚಂದ್ರುರವರು ಪಡಿತರ ಕಾರ್ಡ್‌ಗೆ ಅಕ್ಕಿಯನ್ನ ತಂದಿದ್ದು, ನೀರಿನಲ್ಲಿ ಅಕ್ಕಿ ಹಾಕಿದ್ದಾಗ ತೇಲಿಬಂದಿದೆ. ಅಕ್ಕಿಕಾಳುಗಳು ನೀರಿನಲ್ಲಿ ಮುಳುಗುತ್ತೆ ಆದರೆ ತೆಲುತ್ತಿರುವ ಅಕ್ಕಿಕಾಳುಗಳು ಪ್ಲಾಸ್ಟಿಕ್ ಅಕ್ಕಿ ಎಂಬ ಸಂಶಯಕ್ಕೆ ಕಾರಣವಾಗಿದೆ.

ಚನ್ನಾಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಬಗ್ಗೆ ಮಾಹಿತಿಯನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ, ಅಕ್ಕಿಯನ್ನ ಪರಿಶೀಲನೆ ಮಾಡಿದ ನಂತರವೇ ಆಡುಗೆ ಮಾಡಿ ಎಂಬ ಸಲಹೆಯನ್ನ ನೀಡುತ್ತಿದ್ದಾರೆ, ಪ್ಲಾಸ್ಟಿಕ್ ಅಕ್ಕಿ ವಿತರಸಿದ ಸರ್ಕಾರದ ವಿರುದ್ಧವೂ ಗ್ರಾಮಸ್ಥರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

04/10/2022 06:13 pm

Cinque Terre

35.79 K

Cinque Terre

1

ಸಂಬಂಧಿತ ಸುದ್ದಿ