ಬೆಂಗಳೂರು: ಸಾಕಷ್ಟು ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸಹೋದರರ ರೌಡಿಗಳಲ್ಲಿ ಮತ್ತೊಬ್ಬ ರೌಡಿಶೀಟರ್ ನನ್ನ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ .
ಸಾಗರ್ @ ವೀರು ಎಂಬಾತನನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಹಿಂದೆ ಈತನ ಸಹೋದರ ರೌಡಿ ಸಂಜು ನನ್ನ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಈಗ ಆತನ ಸಹಚರ ವೀರು ಸಹ ಗೂಂಡಾ ಆಕ್ಟ್ ನಡಿ ಜೈಲು ಸೇರಿದ್ದಾನೆ. ಇನ್ನು ಈ ವೀರು ಮೇಲೆ ಕೂಡ ಕೊಲೆ ಯತ್ನ, ಬೆದರಿಕೆ, ಅಪಹರಣ, ಡಕಾಯಿತಿ ಸೇರಿದಂತೆ ಎಂಟಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಸಂಜು ಹಾಗು ವೀರು ಇಬ್ಬರೂ ಜೋಡಿ ರೌಡಿಗಳಾಗಿದ್ದು ಕುಳ್ಳು ರಿಝ್ವಾನ್ ಸಹಚರರಾಗಿದ್ದು , ಸಮಾಜಕ್ಕೆ ಮಾರಕವಾಗಿದ್ದು ಸಾಕಷ್ಟು ತೊಂದರೆ ಕೊಡುತ್ತಿದ್ದ ರೌಡಿಗಳು ಹೀಗಾಗಿ ಪದೇ ಪದೆ ಕೃತ್ಯಗಳನ್ನ ನಡೆಸುತ್ತಿರುವ ಹಿನ್ನಲೆ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ.
Kshetra Samachara
30/09/2022 10:44 am