ಬೆಂಗಳೂರು: ಇವ್ರು ಲೈಫ್ ನ ಅದೆಷ್ಟು ಸಿಂಪಲ್ ಆಗಿ ಲೀಡ್ ಮಾಡ್ತಿದ್ರು ಅಂದ್ರೆ, ಮೈ ಬಗ್ಗಿಸಿ ಕೆಲಸ ಮಾಡ್ತಿರ್ಲಿಲ್ಲ. ಆದ್ರೂ ಇವರ ಶೋಕಿಗೆ ಕಡಿಮೆ ಇರ್ಲಿಲ್ಲ. ಯಾಕಂದ್ರೆ ಇವ್ರು ಮಾಡ್ತಿದ್ದದ್ದು ಬೈಕ್ ಕಳ್ಳತನ. ಹ್ಯಾಂಡ್ ಲಾಕ್ ನ ಕಾಲಿನಿಂದ ಕಟ್ ಮಾಡ್ತಿದ್ದ ಇವ್ರು ನಂತರ ಬೈಕ್ ನ ಈಸಿಯಾಗಿ ಕದ್ದು ಸೀದಾ ತಮಿಳುನಾಡಿಗೆ ಸಾಗಿಸ್ತಿದ್ರು.
ಅಲ್ಲಿ ನಂಬರ್ ಪ್ಲೇಟ್ ಗಳನ್ನ ಬದಲಾಯಿಸುತ್ತಿದ್ದರು ಅಥವಾ ಕೆಲವೊಂದು ಗಾಡಿಗಳಿಗೆ ನಂಬರ್ ಪ್ಲೇಟ್ ನೇ ಹಾಕುತ್ತಿರಲಿಲ್ಲ. ಇಂತಹ ವಾಹನಗಳನ್ನ ತಿರುವಣಾಮಲೈನ ಕುಗ್ರಾಮಗಳಿಗೆ ಹತ್ತು ಹದಿನೈದು ಸಾವಿರಕ್ಕೆ ಮಾರಾಟ ಮಾಡ್ತಿದ್ರು.
ಕುಗ್ರಾಮಗಳಲ್ಲೇ ಓಡಾಡುವ ವಾಹನಗಳನ್ನ ಯಾವ ಪೊಲೀಸ್ ಕೂಡ ಚೆಕ್ ಮಾಡಲ್ಲ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಅಮಾಯಕರನ್ನೇ ಖದೀಮರು ಟಾರ್ಗೆಟ್ ಮಾಡಿ ಮಾರಾಟ ಮಾಡ್ತಿದ್ದರು. ಇದ್ರಲ್ಲಿ ಧರ್ಮಪುರಿಯ ಫಾರೆಸ್ಟ್ ಆಫೀಸರ್ ಬುಲೆಟ್ ಬೈಕ್ ಕೂಡ ಸೇರಿಕೊಂಡಿತ್ತು. ಸದ್ಯ ಈ ಗ್ಯಾಂಗ್ ನಿಂದ ಕೋರಮಂಗಲ ಪೊಲೀಸರು ರಿಕವರಿ ಮಾಡಿರೋದು ಒಂದು ಆಟೋ ಸೇರಿ 29 ದ್ವಿಚಕ್ರ ವಾಹನಗಳು. ಶಾನ್ , ಶೆಹೆಂನ್ಷಾ, ರಂಜಿತ್ ಕುಮಾರ್ ಹಾಗೂ ಶಿವ ಎಂಬ ನಾಲ್ವರನ್ನ ಬಂಧಿಸಿ 15 ಲಕ್ಷ ಮೌಲ್ಯದ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಇನ್ನೂ ಬಂಡೆ ಪಾಳ್ಯ ಪೊಲೀಸ್ರು ಹೈ ಎಂಡ್ ಬೈಕ್ ಕಳ್ಳತನ ಮಾಡ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿ ಸುಮಾರು ಆರು ಲಕ್ಷ ಮೌಲ್ಯದ ಬೈಕ್ ಗಳನ್ನ ಸೀಜ್ ಮಾಡಿದ್ದಾರೆ.
-ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
18/09/2022 08:51 am