ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಹಶೀಲ್ದಾರ್ ಮೇಲೆ ಮಹಿಳೆಯ ಗೂಂಡಾವರ್ತನೆ: ಮಹಿಳೆ ಮೇಲೆ ಕೇಸ್

ನೆಲಮಂಗಲ: ನೆಲಮಂಗಲ ತಾಲ್ಲೂಕಿನ ಸೋಂಪುರ ಗ್ರಾಮದ ಸರ್ವೆ ನಂ 91ರಲ್ಲಿ 28 ಗುಂಟೆ ಗುಂಡು ತೋಪು ಜಮೀನಿನಲ್ಲಿ ವಸೀಂ ಎಂಬಾತನಿಂದ ಅನಧಿಕೃತ ಒತ್ತುವರಿಯಾಗಿತ್ತು. ಈ ಸಂಬಂಧ ದೂರು ಬಂದಿದ್ದು, ಒತ್ತುವರಿ ತೆರವುಗೆ ನೆಲಮಂಗಲ ತಹಶೀಲ್ದಾರ್ ಕೆ.ಮಂಜುನಾಥ್ ತೆರಳಿದ್ರು. ಇದೇ ವೇಳೆ ಒತ್ತುವರಿದಾರನ ಪರವಾಗಿ ಲಾಯರ್ ಎಂದು ಹೇಳಿಕೊಂಡು ಬಂದ ಆಸ್ಮಾ ಕೌಸರ್ ಎಂಬ ಮಹಿಳೆ ತಹಶೀಲ್ದಾರ್ ವಿರುದ್ಧ ಏಕಾಏಕಿ ಏಕವಚನದಲ್ಲಿ ನಿಂದಿಸಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು.

ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಪ್ರಕರಣ ದಾಖಲಿಸಿದ್ರು, ಆದ್ರೆ ಇದುವರೆಗೂ ಆರೋಪಿ ಅಸ್ಮಾ ಕೌಸರನ್ನು ಪೊಲೀಸರು ಬಂಧಿಸದೇ ಇರುವ ಕಾರಣ ಪೊಲೀಸರ ನಡೆ ಖಂಡಿಸಿ ನೆಲಮಂಗಲ ತಾಲ್ಲೂಕಿನ ಸರ್ಕಾರಿ ನೌಕರರು ಕಛೇರಿ ಎದುರು ಪ್ರತಿಭಟನೆ ನಡೆಸುದ್ರು. ನೆಲಮಂಗಲ ತಾಲ್ಲೂಕಿನಾದ್ಯಂತ ದಕ್ಷ ಅಧಿಕಾರಿ, ಜನ ಸ್ನೇಹಿ ಅಧಿಕಾರಿ ಎಂಬ ಹೆಸರನ್ನು ಪಡೆದ ನಮ್ಮ ತಹಶೀಲ್ದಾರ್ ಕೆ. ಮಂಜುನಾಥ್ ಬಗ್ಗೆ ಏಕವಚನದಲ್ಲಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಹಿಳೆಯನ್ನ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ‌ ನೌಕರರ ಸಂಘ,ಕಂದಾಯ ಇಲಾಖೆ ನೌಕರರ ಸಂಘ,ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಭೂ ಮಾಪಕರ ಸಂಘ, ಗ್ರಾಮ ಸಹಾಯಕರ ಸಂಘ, ಶಾಲಾ ಶಿಕ್ಷಕರ ಸಂಘ ಹಾಗೂ ಕೆಲವು ಹಿಂದುಳಿದ ದಲಿತಪರ ಸಂಘಟನೆಗಳು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತ ಪಡಿಸಿ. ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳು, ಕಂದಾಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸುದ್ರು.

ಸುಮಿತ್ರ ಪಬ್ಲಿಕ್ ನೆಕ್ಸ್ಟ್ ನೆಲಮಂಗಲ

Edited By : Manjunath H D
Kshetra Samachara

Kshetra Samachara

10/10/2022 09:16 pm

Cinque Terre

3.8 K

Cinque Terre

0

ಸಂಬಂಧಿತ ಸುದ್ದಿ