ಬೆಂಗಳೂರು: ಪದೇ ಪದೇ ಲೋನ್ ಆ್ಯಪ್ ಗಳಿಂದ ಗ್ರಾಹಕರಿಗೆ ಕಿರುಕುಳ ಆಗ್ತಿರೋ ಹಿನ್ನೆಲೆ,ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿರೋ ಸಿಸಿಬಿ ಎಕಾನಮಿಕ್ ವಿಂಗ್ ತನಿಖೆ ಚುರುಕುಗೊಳಿಸಿದೆ.ಇಗಾಗ್ಲೆ ಕೆಲ ಪ್ರಮುಖ ಪ್ರಕರಣದಲದಲಿ ಆರೋಪಿಗಳನ್ನ ಬಂಧಿಸಿರೊ ಸಿಸಿಬಿ 37ಕೋಟಿಗೂ ಅಧಿಕ ಹಣವನ್ನ ಫ್ರೀಜ್ ಮಾಡಿಸಿದೆ.
ಇಬ್ಬರು ಡೈರೆಕ್ಟರ್ಸ್, ಚಾರ್ಟೆಡ್ ಅಕೌಂಟ್ಸ್, ಹೆಚ್ ಆರ್ ಗಳನ್ನ ಬಂಧಿಸಿರೋ ಸಿಸಿಬಿ,ನಗರದಲ್ಲಿ ದಾಖಲಾಗಿರೋ 24 ಕೇಸ್ ಗಳ ತನಿಖೆ ನಡೆಸ್ತಿದೆ. ಕಳೆದೊಂದು ವರ್ಷದಿಂದ ತನಿಖೆ ನಡೆಸ್ತಿರೋ ಸಿಸಿಬಿ ಅಧಿಕಾರಿಗಳು ಪ್ರಕರಣದ ಬಗ್ಗೆ ಇ.ಡಿಗೆ ಮಾಹಿತಿ ನೀಡಿದೆ.ತನಿಖೆ ವೇಳೆ ದೊಡ್ಡ ಮಟ್ಟದಲ್ಲಿ ಹಣ ರ್ಗಾವಣೆಯಾಗಿರೋದು ಪತ್ತೆಯಾಗುದ್ದು,ಹೀಗಾಗಿ ಪ್ರಕರಣವನ್ನ ಇ.ಡಿಗೆ ರೆಫರ್ ಮಾಡಿದೆ.ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಮೇತ ಇ.ಡಿಗೆ ಪತ್ರ ಬರೆದಿದ್ದು, 256 ಲೋನ್ ಆ್ಯಪ್ ಗಳ ಮಾಹಿತಿ ಕಲೆ ಹಾಕಿ ಸಿಸಿಬಿ ತನಿಖೆ ನಡೆಸಿತ್ತು.
PublicNext
19/09/2022 07:35 pm