ಆನೇಕಲ್: ಪ್ರತಿಷ್ಠಿತ ಅಲಯನ್ಸ್ ಕಾಲೇಜಿನಲ್ಲಿ ಮತ್ತೆ ವಾರಸುದಾರಿಕೆಗೆ ಸಹೋದರರ ನಡುವೆ ಕಿತ್ತಾಟ ಶುರುವಾಗಿದೆ. ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಆನೇಕಲ್ ಅಲಯನ್ಸ್ಗೆ ವಿರೋಧಿ ಬಣದ ಸಹೋದರ ಮಧುಕರ್ ಅಂಗೂರ್ ಅವರು ತಮ್ಮ ತಂಡದೊಂದಿಗೆ ಯೂನಿವರ್ಸಿಟಿ ಒಳಗೆ ನುಗ್ಗಿದ್ದಾರೆ. ಈ ವೇಳೆ ಕಾಲೇಜಿನ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇನ್ನು ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಕೂಡಾ ಮಧುಕರ್ ಅಂಗೂರ್ ಜೊತೆ ಅಲಯನ್ಸ್ ಯುನಿವರ್ಸಿಟಿಗೆ ನುಗ್ಗಿದ್ದಾರೆ. ಹೀಗಾಗಿ ಸ್ವರ್ಣಲತಾ, ಮಧುಕರ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿದ್ದಾರೆ.
ಮಧುಕರ್ ಅಂಗೂರ್, ಸ್ವರ್ಣಲತಾ, ರವಿಕುಮಾರ್ ಮನ್ನವ್, ಪದ್ಮನಾಭ್, ಮೋಹನ್, ಪೂಣಚ್ಚ ಸೇರಿ 50 ಮಂದಿ ಮೇಲೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇತ್ತ ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿಯಾಗಿದ್ದು, ಸ್ವರ್ಣಲತಾಳಿಗಾಗಿ ಆನೇಕಲ್ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸ್ವರ್ಣಲತಾ ಅವರು ಖ್ಯಾತ ಗೈನೊಕಾಲಜಿಸ್ಟ್ ಕೂಡ ಆಗಿದ್ದಾರೆ.
PublicNext
15/09/2022 02:04 pm