ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಯುರ್ವೇದ ವಿಶ್ವವ್ಯಾಪಿಗೊಳಿಸಲು ಪಣ; "ವಿಷನ್ 2047" ರಾಷ್ಟ್ರೀಯ ಸಮ್ಮೇಳನ

ಬೆಂಗಳೂರು: ಬೆಂಗಳೂರಿನ ಯಲಹಂಕದ ಜಾರಕಬಂಡೆ ಕಾವಲ್ ನಲ್ಲಿರುವ "ಅಂತರ ವಿಷಯ ಆರೋಗ್ಯ ವಿಜ್ಞಾನ ಮತ್ತು ವಿಶ್ವವಿದ್ಯಾಲಯ" (Trans Disciplinary University) ದಲ್ಲಿ ಪ್ರಧಾನಮಂತ್ರಿಗಳ 'ಧಾರ' ಯೋಜನೆಯ 2 ದಿನಗಳ "ರಾಷ್ಟ್ರೀಯ ಆಯುರ್ವೇದ ವಿಷನ್ 2047" ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ದೇಶದ ಎಲ್ಲಾ ರಾಜ್ಯಗಳಿಂದ ಸಾವಿರಾರು ನುರಿತ ತಜ್ಞರು, ಆಯುರ್ವೇದ, ಯೋಗ, ಯುನಾನಿ, ಸಿದ್ಧ ವೈದ್ಯರು, ವಿದ್ಯಾರ್ಥಿಗಳು ಭಾಗವಹಿಸಿ ಉಪಯೋಗ ಪಡೆದರು.

ಪ್ರಧಾನಿ ಮೋದಿಯವರ ಕನಸಿನಂತೆ ಯೋಗ ವಿಶ್ವವ್ಯಾಪಿಯಾಗಿದೆ. ಬರುವ 2047ರೊಳಗೆ ಭಾರತ ಮೂಲದ ಆಯುರ್ವೇದವನ್ನೂ ಹೇಗೆ ಪ್ರಪಂಚಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದ ಯಲಹಂಕದ TDU ಯುನಿವರ್ಸಿಟಿಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಯೋಗದಂತೆ ಆಯುರ್ವೇದ ಸಹ ಭಾರತ ಮೂಲದ ವೈದ್ಯ ಪ್ರಕಾರ. ಆಯುರ್ವೇದದ ಅಗತ್ಯವನ್ನರಿತ ಕೆಂದ್ರ ಸರ್ಕಾರ 2047ರೊಳಗೆ ಮನೆ- ಮನೆಗೆ ಆಯುರ್ವೇದ ತಲುಪಿಸಲು ಕಾರ್ಯೋನ್ಮುಖವಾಗಿದೆ.

ರಾಷ್ಟ್ರೀಯ ಆಯುರ್ವೇದ ಸಮ್ಮೇಳನವನ್ನು TDU, ಕೇಂದ್ರ ಆಯುಷ್, ಎಜುಕೇಷನ್, ಕಲ್ಚರ್ ಇಲಾಖೆ ಸಂಯುಕ್ತವಾಗಿ ಆಯೋಜಿಸಿವೆ. ರಾಜಮಾತೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್, ಬಿಡಿಎ ಅಧ್ಯಕ್ಷ S.R.ವಿಶ್ವನಾಥ್, ಕೇಂದ್ರ ಶಿಕ್ಷಣ, ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳು ಉದ್ಘಾಟಿಸಿ ಚಾಲನೆ ನೀಡಿದರು. ಅಂತೂ ಭಾರತದ ಯೋಗದಂತೆ ಆಯುರ್ವೇದವೂ ವಿಶ್ವವ್ಯಾಪಿಯಾಗಿ, ಬೆಳಗಲಿ.

Edited By : Nagesh Gaonkar
PublicNext

PublicNext

23/09/2022 10:43 pm

Cinque Terre

30.34 K

Cinque Terre

0

ಸಂಬಂಧಿತ ಸುದ್ದಿ