ಬೆಂಗಳೂರು: ಸ್ಕೇಟ್ ಬೋರ್ಡ್‌ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ ಪ್ರಯಾಣ ಮಾಡಿ ಸಾಧನೆ ಮಾಡಲು ಮುಂದಾದ ಕೇರಳ ಮೂಲದ ಯುವಕ ಅನಸ್ ಹಾಜಸ್. 31 ವರ್ಷದ ಅನಸ್ ಹಾಜಸ್ 3700 ಕಿಲೋಮೀಟರ್ ಉದ್ದದ ಪ್ರಯಾಣವನ್ನು ಸ್ಕೇಟ್ ಬೋರ್ಡ್‌ನಲ್ಲಿ ಮಾಡಿ ದಾಖಲೆ ಸೃಷ್ಟಿಸಬೇಕೆಂದು ಹೊರಟಿದ್ದ ಯುವಕನ ಕನಸು ನುಚ್ಚುನೂರಾಗಿದೆ.
ಹೌದು..ಕೇರಳದ ಯುವಕ ಅನಸ್ ಹಾಜಸ್ ಕನ್ಯಾಕುಮಾರಿ ನಿಂದ ಕಾಶ್ಮೀರದ ವರೆಗೆ ಸ್ಕೇಟ್ ಬೋರ್ಡ್‌ನಲ್ಲಿ ಪ್ರಯಾಣ ಮಾಡಿ ದಾಖಲೆ ಸೃಷ್ಟಿ ಮಾಡಬೇಕಾಗಿದ್ದ ಯುವಕ ದಾರುಣವಾಗಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೇ 29ರಂದು ಕನ್ಯಾಕುಮಾರಿಯಿಂದ ಸ್ಕೇಟ್ ಬೋರ್ಡ್ ಪ್ರಯಾಣ ಶುರು ಮಾಡಿದ್ದ. ಆತ ಆಗಲೇ 2300 ಕಿಲೋಮೀಟರ್ ಪ್ರಯಾಣ ಕೂಡ ಮುಗಿಸಿದ್ದ ಇನ್ನೇನು ಕೆಲವೇ ಕಿಲೋಮೀಟರ್ ಬಾಕಿ ಇದ್ದಾಗಲೇ ಹೆದ್ದಾರಿ ಮೇಲೆ ಬಂದ ಲಾರಿಯೊಂದು ಯುವಕನ ಪ್ರಯಾಣವನ್ನು ಶಾಶ್ವತವಾಗಿ ಮುಗಿಸಿದೆ.
ಹರಿಯಾಣದ ಕಾಳಿಕಾ ಊರಿನ ಬಳಿ ಯುವಕ ಪ್ರಯಾಣ ಮಾಡುವೆ ಕಾದಾಗ ಹಿಂದಿನಿಂದ ಬಂದ ಲಾರಿಯೊಂದು ಯುವಕನ ಉಸಿರು ನಿಲ್ಲಿಸಿದೆ. ಸ್ಕೇಟ್ ಬೋರ್ಡ್‌ನಲ್ಲಿ ಪ್ರಯಾಣ ಮಾಡಿ ದಾಖಲೆ ಸೃಷ್ಟಿ ಮಾಡಲು ಮುಂದಾದ ಅನಸ್ ಹಾಜಸ್ ನ ಕನಸು ನುಚ್ಚುನೂರಾಗಿದೆ. ಆತನ ಕನಸು ರಸ್ತೆಯಲ್ಲೇ ಕೊಚ್ಚಿ ಹೋಗಿದೆ. ಈಗ ಅನಸ್ ಹಾಜಸ್ ನಾ ಅಂತ್ಯ ನೆನೆದು ದೇಶದಾದ್ಯಂತ ಸಾಮಾಜಿಕ ತಾಣದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
21/08/2022 07:18 pm