ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಲಾ ಬಸ್ ಚಾಲಕನ ಅಚಾತುರ್ಯ ಸರಣಿ ಅಪಘಾತ- ತಪ್ಪಿದ ಭಾರಿ ಅನಾಹುತ

ಯಲಹಂಕ: ಬಸ್ ಚಾಲಕನ ಅಚಾತುರ್ಯಕ್ಕೆ ಇಂದು ಸಂಜೆ 4 ಗಂಟೆಗೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಸುರಭಿಲೇಔಟ್ ಬ್ಯಾಂಕ್ ಆಫ್ ಬರೋಡಾ ಸರ್ಕಲ್ ಬಳಿ ಸರಣಿ ಅಪಘಾತ ಸಂಭವಿಸಿದೆ.

ಅಪಘಾತಕ್ಕೆ ಸ್ಕೂಲ್ ಬಸ್ ಚಾಲಕ ಪುನೀತ್ (28)ನ ಅಚಾತುರ್ಯ ಕಾರಣ ಎನ್ನಲಾಗಿದೆ. ಚಾಲಕ ನಿದ್ದೆಗೆ ಜಾರಿದ್ದರಿಂದ ಅಥವಾ ಬಸ್ ಬ್ರೇಕ್ ಫೇಲ್ ಆಗಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನುವುದು ತನಿಖೆ ಬಳಿಕ ಗೊತ್ತಾಗಬೇಕಿದೆ. ಅಪಘಾತದಲ್ಲಿ ಸ್ವಿಫ್ಟ್ ಕಾರು, ಹೋಂಡಾ ಆಕ್ಷೀವಾ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿವೆ. ಕೊಡಿಗೇಹಳ್ಳಿ ದೇವಿ ಇಂಟರ್ನ್ಯಾಷನಲ್ ಶಾಲೆಗೆ ಸೇರಿದ ಮಿನಿ ಬಸ್ ದುರಂತಕ್ಕೆ ‌ಕಾರಣವಾಗಿದೆ.

ಅಪಘಾತದ ವೇಳೆ ಬಸ್‌ನಲ್ಲಿ 7 ಜನ ವಿದ್ಯಾರ್ಥಿಗಳಿದ್ದು, ಯಾರಿಗೂ ಏನೂ ತೊಂದರೆಯಾಗಿಲ್ಲ. ಆದರೆ ಸ್ವಿಫ್ಟ್ ಕಾರಿನಲ್ಲಿ ಎರಡು ವರ್ಷದ ಮಗುವಿನ ಜೊತೆ ತಂದೆ ತಾಯಿ‌ ಇದ್ದು, ಯಾರಿಗೂ ತೊಂದರೆ ಆಗಿಲ್ಲ. ಆದರೆ ಕಾರಿನ ಹಿಂಬಾಗ ನಜ್ಜು ಗುಜ್ಜಾಗಿದೆ. ಕಾರಿಗೆ‌ ಗುದ್ದಿದ ದೇವಿ ಸ್ಕೂಲ್ ಬಸ್ ಹೋಂಡಾ ಆಕ್ಟೀವಾ ಬೈಕ್ ಅನ್ನು 40 ಮೀಟರ್‌ವರೆಗೂ ಎಳೆದೊಯ್ದ CCTV Public Nextಗೆ Exclusive ಆಗಿ ಲಭ್ಯವಾಗಿದೆ.

ಕೊಡಿಗೇಹಳ್ಳಿ ಮೂಲದ ದೇವರಾಜಪ್ಪ ಅವರಿಗೆ ಸೇರಿದ ದೇವಿ ಇಂಟರ್ನ್ಯಾಷನಲ್ ಸ್ಕೂಲ್ ಬಸ್ ಚಾಲಕನ ಮತ್ತು ಸಂಸ್ಥೆಯ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

12/07/2022 08:58 pm

Cinque Terre

48.95 K

Cinque Terre

0

ಸಂಬಂಧಿತ ಸುದ್ದಿ