ಅನೇಕಲ್: ಭಾರಿ ಗಾತ್ರದ ಲಾರಿಯೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿರುವ ಘಟನೆ ಆನೇಕಲ್ ಹೊಸೂರು ಮುಖ್ಯ ರಸ್ತೆ ಹೊಂಪಲಘಟ್ಟ ಗೇಟ್ ಬಳಿ ನಡೆದಿದೆ.
ಇಂದು ಬೆಳಗ್ಗೆ ಸರಕು ಸಾಗಣೆ ಲಾರಿ ಯೊಂದು ಹೊಸೂರಿನಿಂದ ಆನೇಕಲ್ ಕಡೆಗೆ ಬರುವಾಗ ತಿರುವು ಜಾಗದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಆಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
Kshetra Samachara
05/07/2022 09:06 am