ಬೆಂಗಳೂರು: ಸಾವು ಯಾವ ರೂಪದಲ್ಲಿ ಹೇಗೆ ಬರುತ್ತೊ ಹೇಳಲು ಸಾದ್ಯವಿಲ್ಲ. ಯಲಹಂಕದ CRPF ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೆನ್ನೆ ರಾತ್ರಿ ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನು ನೆನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ದುರದೃಷ್ಟ ಇಂದು ಮುಂಜಾನೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಹೀಗೆ ಜೋರು ಮೀಸೆ ಬಿಟ್ಟವರು 54ವರ್ಷದ ಸ್ವಾಮಿಗೌಡ. ಯಲಹಂಕದ CRPF ಸೆಂಟರ್ ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಯಮೆನ್ ದೇಶದ ಹಮ್ಮರ್ ಸುಲೇಹಾ ಎಂಬ 22ವರ್ಷದ ಯುವಕ M.S.ರಾಮಯ್ಯ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದುತ್ತಿದ್ದ. ಕಳೆದ ರಾತ್ರಿ 11-30ರ ಸುಮಾರಿಗೆ CRPF ಗೇಟ್ ಬಳಿ ಸ್ವಾಮಿಗೌಡ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ಸುಲೇಹಾ PSIಗೆ ಡಿಕ್ಕಿ ಹೊಡೆದು ಇಬ್ಬರೂ ಗಾಯಗೊಂಡಿದ್ದರು.
ದುರಂತ ಎಂಬಂತೆ ಚಿಕಿತ್ಸೆ ಫಲಕಾರಿಯಾಗದೆ PSI & ವಿದೇಶಿ ಪ್ರಜೆ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪರಿಶೀಲನೆ ಮುಂದುವರೆದಿದೆ.
PublicNext
31/03/2022 07:42 pm