ಬೆಂಗಳೂರು:-ನೆನ್ನೆ ರಾತ್ರಿ9-30ರ ಸುಮಾರಿಗೆ ಬೆಂಗಳೂರಿನ ಬನ್ನೇರುಘಟ್ಟ- ತುಮಕೂರು ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಸರಣಿ ಅಪಘಾತ ಸಂಭವಿಸಿದೆ.
ದುರಂತದಲ್ಲಿ ಕೇರಳ ರಿಜಿಸ್ಟ್ರೇಷನ್ನ ವ್ಯಾಗನಾರ್ ಕಾರಿನಲ್ಲಿ ಇಬ್ಬರು ಪುರುಷರು & ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೊದಲು ವೇಗವಾಗಿ ಬಂದ ಟ್ರಕ್ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ವಾಂಕರ ಅಪಾರ್ಟ್ಮೆಂಟ್ ಬಳಿ ರಾತ್ರಿ ದುರಂತ ಘಟಿಸಿದೆ.
ಸರಣಿ ಅಪಘಾತಕ್ಕೆ ಕಾರಣವಾದ ಟ್ರಕ್, ಕಾರುಗಳು ಸೇರಿ & ಕಂಟೈನರ್ಗಳು ಜಖಂಗೊಂಡಿವೆ. ತಮಿಳುನಾಡು ರಿಜಿಸ್ಟ್ರೇಷನ್ ನ ಟ್ರಕ್ ನ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಟ್ರಕ್ ಮೊದಲು ಕೇರಳ ರಿಜಿಸ್ಟ್ರೇಷನ್ನಿನ ವ್ಯಾಗನಾರ್ ಕಾರಿಗೆ ಗುದ್ದಿದೆ.ನಂತರ ಸ್ವಿಪ್ಟ್ ಕಾರಿಗೆ ಕಂಟೈನರ್ ಲಾರಿ ಪರಸ್ಪರ ಗುದ್ದಿಕೊಂಡಿವೆ.
ಅಪಘಾತದಲ್ಲಿ ಕ್ವಾಲೀಸ್ ಮತ್ತು ಸ್ವಿಪ್ಟ್ ಕಾರಿಗೆ ಡ್ಯಾಮೇಜ್ ಅಗಿದ್ದು, ಮೂರರಿಂದ ನಾಲ್ಕು ಕಂಟೈನರ್ ವಾಹನಗಳು ಜಖಂಗೊಂಡಿವೆ.
ಕ್ವಾಲೀಸ್ ಕಾರಿನಲ್ಲಿದ್ದ ನಾಲ್ಕುಜನ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ವಿಪ್ಟ್ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ದುರಂತ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಘಟನೆಗೆ ಸಂಬಂಧಿಸಿ FIR ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
PublicNext
08/01/2022 11:04 am