ಆನೇಕಲ್:ಸಂಜೆ ಸುರಿದ ಧಾರಾಕಾರ ಮಳೆಯಲ್ಲಿ ವಯಸ್ಸಾದ ವೃದ್ಧನೊಬ್ಬ ಕುಡಿದ ಅಮಲಿನಲ್ಲಿ ವಾಹನ ಸವಾರರ ಜೊತೆ ಗಲಾಟೆ ಮಾಡಿಕೊಂಡು ನೀರು ಹಾದು ಹೋಗುವ ಗುಂಡಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಗಡಿಭಾಗದ ಹೊಸೂರು ಬಳಿ ನಡೆದಿದೆ.
ಇನ್ನು ಗುಂಡಿ ಒಳಗೆ ಬೀಳುತ್ತಿರುವ ದೃಶ್ಯಾವಳಿಗಳು ಅಲ್ಲಿನ ಸ್ಥಳೀಯರ ಮೊಬೈಲಲ್ಲಿ ಸೆರೆಯಾಗಿದೆ. ಆತನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
03/08/2022 09:12 pm