ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಭ್ರಮದ ಅದ್ದೂರಿ ಹೋಳಿಗೆ ಬುತ್ತಿ ಮೆರವಣಿಗೆ

ರಬಕವಿ-ಬನಹಟ್ಟಿ:

ಶೂನ್ಯಸಿಂಹನಾಧೀಶ್ವರ ಅಲ್ಲಮಪ್ರಭುದೇವರ ನೂತನ ಕಟ್ಟಡ ಲೋಕಾರ್ಪಣೆ ಹಿನ್ನೆಲೆಯಲ್ಲಿ ಶೇಗುಣಸಿ ಡಾ.ಮಹಾಂತಪ್ರಭು, ಸ್ಥಳೀಯ ಹಿರೇಮಠದ ಗಂಗಾಧರದೇವರು ಸೇರಿದಂತೆ ಹಲವು ಮಠಾಧೀಶರ ನೇತೃತ್ವದಲ್ಲಿ ನಡೆಯುತ್ತಿರುವ ಒಂದು ತಿಂಗಳಪರ್ಯಂತರ ಪ್ರಭು ಪರಂ ಜ್ಯೋತಿ ಯಾತ್ರೆ ಅಂಗವಾಗಿ ಶೇಂಗಾ ಹೋಳಿಗೆ ಬುತ್ತಿ ಹೊತ್ತ ಮಹಿಳೆಯರ ಅದ್ಭುತ ಮೆರವಣಿಗೆ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಡಾ.ಮಹಾಂತಪ್ರಭುಗಳ ಮಾರ್ಗದರ್ಶನದಂತೆ ತೇರದಾಳದ ಮನೆಮನೆಗಳಿಂದ ಶೇಂಗಾ ಹೋಳಿಗೆಯನ್ನು ತಾಯಂದಿರು ತಯಾರಿಸಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಸ್ಥಳೀಯ ನೀಲಕಂಠೇಶ್ವರ ಮಠದ ಆವರಣದಲ್ಲಿ ಜಮಾಯಿಸಿದರು. ಅಲ್ಲಿಂದ ಹೋಳಿಗೆ ಬುಟ್ಟಿಗಳನ್ನು ಹಾಗೂ ವಚನಗ್ರಂಥ ಕಟ್ಟುಗಳನ್ನು ತಾಯಂದಿರು ತಲೆಯ ಮೇಲೆ ಹೊತ್ತುಕೊಂಡು ಶ್ರೀ ಗುರು ಬಸವಲಿಂಗಾಯ ನಮಃ ಓಂ ಎಂಬ ಮಂತ್ರೋಚ್ಛಾರಣೆಯೊಂದಿಗೆ ಭವ್ಯಮೆರಣಿಗೆಯಲ್ಲಿ ಸಾಗಿದರು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಶ್ರೀಮಠದಿಂದ ಎಪಿಎಂಸಿ, ಡಚ್ ಕಾಲನಿ, ಪದ್ಮಾ ಆಸ್ಪತ್ರೆ, ನಿವರಗಿ ಟೆಕ್ಸಟೈಲ್, ಮಹಾವೀರ ವೃತ್ತ, ಬಸ್ ನಿಲ್ದಾಣ, ಚಾವಡಿ ಕಚೇರಿ, ಹನುಮಾನದೇವಸ್ಥಾನ ವೃತ್ತ, ಅಲ್ಲಮಪ್ರಭು ದ್ವಾರಬಾಗಿಲು ಮಾರ್ಗವಾಗಿ ಅಲ್ಲಮಪ್ರಭು ದೇವಸ್ತಾನದವರೆಗೆ ಜರುಗಿತು.

ಮೆರವಣಿಗೆಯಲ್ಲಿ ಝಾಂಜ, ಹರಿಭಜನೆ ಸೇರಿದಂತೆ ವಿವಿಧ ವಾದ್ಯಮೇಳಗಳು ಮೇಳೈಸಿದವು.

Edited By : PublicNext Desk
Kshetra Samachara

Kshetra Samachara

28/10/2024 11:02 pm

Cinque Terre

4.48 K

Cinque Terre

0