ಬಾಗಲಕೋಟೆ: ಕೇಸರಿ ಕೋಟೆ ಬಾಗಲಕೋಟೆ ನಗರ ಆರೆಸ್ಸೆಸ್ ಪಥಸಂಚಲಕ್ಕೆ ಭರದ ಸಿದ್ಧತೆಗಳು ಆರಂಭಗೊಂಡಿವೆ. ಇದುವರೆಗೂ ಪ್ರತಿ ವರ್ಷ ನಡೆದಿರುವ ಆರೆಸ್ಸೆಸ್ ಪಥಸಂಚಲನ ರಾಜ್ಯದ ಗಮನ ಸೆಳೆಯುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಈ ವರ್ಷವೂ ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ನಗರ ಸಿಂಗಾರಗೊಳ್ಳುತ್ತಿದೆ.
ಅಂದಾಜು 2500 ಕ್ಕೂ ಹೆಚ್ಚು ಘನವೇಷಧಾರಿಗಳು ಎರಡು ತಂಡವಾಗಿ ಭಾಗವಹಿಸುವರು. ಘನವೇಷಧಾರಿಗಳ ಎರಡೂ ತಂಡಗಳು ಒಂದಾಗಿ ಸಮಾಗಮಗೊಂಡು ಮುಂದೆ ಸಾಗುವ ಸ್ಥಳ ಬಸವೇಶ್ವರ ವೃತ್ತದಲ್ಲಿ ಈ ಬಾರಿ ಶಿರೂರ ಅಗಸಿ ಮಾದರಿ ಕಮಾನ್ ನಿರ್ಮಿಸಲಾಗಿದೆ. ಇದು ಇಡೀ ನಗರದ ಗಮನ ಸೆಳೆಯುತ್ತಿದೆ. ಹಾಗೆ ಪಥಸಂಚಲನದ ಎರಡೂ ಮಾರ್ಗಗಳ ಇಕ್ಕೆಲಗಳಲ್ಲಿ ಘನವೇಷಧಾರಿಗಳ ಸ್ವಾಗತಕ್ಕೆ ಭಾರಿ ಪ್ರಮಾಣದ ಫ್ಲೆಕ್ಸ್, ಬೋರ್ಡ್ ಗಳು ಕೇರಿಸಿ ಧ್ವಜ ಮತ್ತು ಸ್ವಾಗತ ಕಮಾನ್‌ಗಳು, ಕೇಸರಿ ತಳಿರುಗಳು ಸಂಪೂರ್ಣ ನಗರವನ್ನಾವರಿಸಿಕೊಂಡಿವೆ. ಒಟ್ಟಾರೆ ನಾಳೆಯ ಆರೆಸ್ಸೆಸ್ ಪಥಸಂಚಲನ ಹಿನ್ನೆಲೆಯಲ್ಲಿ ನಗರವೆಲ್ಲ ಕೇಸರಿಮಯವಾಗಿದೆ.
PublicNext
08/10/2022 04:52 pm