ವರದಿ : ವಿಠ್ಠಲ ಬಲಕುಂದಿ
ಬಾಗಲಕೋಟೆ: ಜಿಲ್ಲೆಯ ಕೆರೂರ ಪಟ್ಟಣ ಮತ್ತೆ ರಾಜ್ಯದ ಗಮನ ಸೆಳೆದಿದೆ. ಗಣೇಶೋತ್ಸವ ಸಮಯದಲ್ಲಿ ಯುವಕರು ಮತ್ತು ಪೊಲೀಸರ ನಡುವೆ ನಡೆದ ಗಲಾಟೆ ಪ್ರಕರಣದ ಪರ, ವಿರೋಧ ಚರ್ಚೆ ಇದೀಗ ತಾರಕಕ್ಕೇರಿದೆ.
ಹಿಂಜಾವೇ ಸಂಘಟನೆ ಜಿಲ್ಲೆಯ ನಡೆ ಕೆರೂರ ಕಡೆ ಅಭಿಯಾನ ಹಮ್ಮಿಕೊಂಡಿದ್ದು, ಇದೇ ವೇಳೆ ಕೋಮುವಾದಿಗಳ ದುಷ್ಕೃತ್ಯ ಖಂಡಿಸಿ ಭಾರತೀಯ ಶರಣ ಸೇನಾ ಪಡೆದ ಕುಳಗೇರಿ ಕ್ರಾಸ್ ನಿಂದ ಕೆರೂರ ವರೆಗೆ ಸೋಮವಾರ ಸದ್ಭಾವನಾ ಯಾತ್ರೆ ಹಮ್ಮಿಕೊಂಡಿದೆ.
ಏತನ್ಮಧ್ಯೆ ಕೆರೂರನಲ್ಲಿ ಶಾಂತಿ ,ಸುವ್ಯವಸ್ಥೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹಿಂದು ಸಂಘಟನೆ ಮುಖಂಡರು ಮತ್ತು ಪೊಲೀಸರೊಂದಿಗೆ ಶನಿವಾರ ರಹಸ್ಯಸಭೆ ಕೂಡ ನಡೆಸಿದ್ದಾರೆ. ಸಚಿವರು ಎಲ್ಲಿಯೂ ಸಭೆ ವಿವರ ಬಹಿರಂಗ ಪಡಿಸಿಲ್ಲ. ಅದೊಂದು ಸೂಕ್ಷ್ಮ ವಿಷಯ ಎಂದು ಮಾತ್ರ ಹೇಳಿ ಹೋಗಿದ್ದಾರೆ.
ಪರಿಣಾಮವಾಗಿ ಕೆರೂರ ಪಟ್ಟಣ ಸಧ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಶತಾಯ- ಗತಾಯ ನಾಳೆ ನಡೆಯುಚ ಎರಡೂ ಕಾರ್ಯಕ್ರಮ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.
ಇಂದು ಸಂಜೆಯ ಹೊತ್ತಿಗೆ ಹೆಚ್ಚುವರಿ ಪೊಲೀಸರು ಕೆರೂರಗೆ ಆಗಮಿಸಿ ಬೀಡು ಬಿಡಲಿದ್ದಾರೆ. ಸೋಮವಾರ ಬೆಳಗಿನ ಹೊತ್ತಿಗೆ ಕೆರೂರನಲ್ಲಿ ಪೊಲೀಸ್ ಕಾವಲು ಬಿಗಿಗೊಳ್ಳಲಿದ್ದು, ಶಾಂತಿ ಸುವ್ಯವಸ್ಥೆಗೆ ಭಂಗಬಾರದಂತೆ ಕಟ್ಟೆಚ್ಷರ ವಹಿಸಲಿದೆ.
ಕಳೆದ ಮೂರು ತಿಂಗಳು ಹಿಂದೆ ನಡೆದ ಕೋಮು ಸಂಘರ್ಷ ಕಿಡಿ ಇಂದಿಗೂ ಆರುತ್ತಿಲ್ಲ. ಗಣೇಶೋತ್ಸವ ವೇಳೆ ಕೋಮು ಸಂಘರ್ಷದ ಕಿಡಿ ಮತ್ತೊಮ್ಮೆಹೊತ್ತಿ ಉರಿದಿದೆ. ಅದರ ಫಲವಾಗಿಯೇ ನಾಳೆ ಜಿಲ್ಲೆಯ ನಡಿಗೆ ಕೆರೂರ ಕಡೆಗೆ, ಶಾಂತಿ ಸದ್ಬಾವನಾ ಯಾತ್ರೆಗಳು ನಡೆಯುತ್ತಿವೆ.
ಇಷ್ಟೆಲ್ಲ ವಿದ್ಯಮಾನಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಯಾವೊಬ್ಬ ಜನಪ್ರತಿಧಿಯೂ ಈ ಬಗ್ಗೆ ಚಕಾರವೆತ್ತಿಲ್ಲ. ಜನ ಸಾಮಾನ್ಯರು ಮಾತ್ರ ಆತಂಕದಲ್ಲಿ ಕಾಲ ಕಳೆಯಬೇಕಾಗಿ ಬಂದಿದಿರುವುದರಿಂದ ಇಡೀ ರಾಜ್ಯ ಕೆರೂರನತ್ತ ಸ ನೋಡುತ್ತಿದೆ.
PublicNext
18/09/2022 03:17 pm