ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವಕ್ಕೆ ಕರ್ಮದ ಮಹತ್ವ ತಿಳಿಸಿದ ವಿಶ್ವಕರ್ಮ : ಎಡಿಸಿ

ಬಾಗಲಕೋಟೆ: ದೇವಲೋಕವನ್ನೇ ಸೃಷ್ಠಿಸಿದ ವಿಶ್ವ ಕರ್ಮರು ವಿಶ್ವಕ್ಕೆ ಕರ್ಮದ ಮಹತ್ವ ತಿಳಿಸಿಕೊಟ್ಟವರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು. ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಹಮ್ಮಿಕೊಂಡ ವಿಶ್ವಕರ್ಮರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರಿಗೆ ಉಪಯುಕ್ತ ಕೃಷಿ ಪರಿಕರಗಳನ್ನು ಮಾಡಿಕೊಡುವ ವಿಶ್ವಕರ್ಮ ಸಮಾಜಕ್ಕೆ ರೈತರಷ್ಟೇ ಪ್ರಾಮುಖ್ಯತೆ ಪಡೆದಿದೆ ಎಂದರು.

ನಿರ್ಮಾಣ ಹಂತದ ಪ್ರತಿಯೊಂದು ಕಾರ್ಯದಲ್ಲಿ ವಿಶ್ವಕರ್ಮರ ಶ್ರಮವಿದೆ. ಕ್ಲಿಷ್ಠಕರ ಅತೀಸೂಕ್ಷö್ಮವಾಗಿ ತಯಾರಿಸುವ ಬಂಗಾರ, ಬೆಳ್ಳಿ ಆಭರಣಗಳು, ಕಮ್ಮಾರಿಕೆ, ಬಡಿಗತನ, ಶಿಲ್ಪ, ವಾಸ್ತುಶಿಲ್ಪಗಳಲ್ಲದೇ ವಿವಿಧ ಕ್ಷೇತ್ರಗಳಲ್ಲು ಕೂಡಾ ವಿಶ್ವಕರ್ಮರಿಗೆ ಪ್ರಾತಿನಿದ್ಯ ಇದೆ. ಸಕಲ ಸಮಾಜದವರೊಡನೆ ಸ್ನೇಹಜೀವಿಗಳಾದ ವಿಶ್ವಕರ್ಮರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ವಿಶ್ವಕರ್ಮರಂತ ಅವತಾರಿ ಪುರುಷನ ಸಂತತಿಯಾಗಿರುವ ಸಮಾಜ ಭಾಂದವರು ವಿಶ್ವಕರ್ಮರನ್ನು ಅನುಸರಿಸಿ ಅವರನ್ನು ಗೌರವಿಸುದರ ಜೊತೆಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

ಅದ್ದೂರಿ ಮೆರವಣಿಗೆಃ

ವಿಶ್ವಕರ್ಮರ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಪೂಜೆ ಸಲ್ಲಿಸುವ ಮೂಲಕ ಮೆರವಣಿ ಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಮುಕ್ತಾಯವಾಯಿತು, ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಮೆರವಣ ಗೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಸಮುದಾಯದವರು ಪಾಲ್ಗೊಂಡಿದ್ದರು.

Edited By : Nirmala Aralikatti
Kshetra Samachara

Kshetra Samachara

18/09/2022 10:34 am

Cinque Terre

2.86 K

Cinque Terre

0