ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾದಾಮಿ ಪುರಸಭೆ ಪೌರಕಾರ್ಮಿಕರಿಗೆ ಸನ್ಮಾನ

ಬಾಗಲಕೋಟೆ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮ ದೇವಿ ದೇವಸ್ಥಾನದಲ್ಲಿ ಮಹಿಳಾ ಪುರಸಭೆ ಪೌರಕಾರ್ಮಿ ಕರಿಗೆ ಸನ್ಮಾನಿಸಲಾಯಿತು. ಪುರಸಭೆ ಸದಸ್ಯ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಕಾಚೆಟ್ಟಿ ಮಾತನಾಡಿ ಪೌರಕಾರ್ಮಿಕರ ಕಾರ್ಯವನ್ನು ಶ್ಲಾಘಿಸಿ, ನಗರ ಸುಂದರವಾಗಿ ಕಾಣಲು ಇವರ ಕಾರ್ಯ ಮುಂಚೂಣಿ ಯಲ್ಲಿದೆ ಎಂದು ಹೇಳಿದರು.

ಜೆಸ್ಕಾಂ ನಿರ್ದೇಶಕ ಮುತ್ತು ಉಳ್ಳಾಗಡ್ಡಿ ಮಾತನಾಡಿ ಸರ್ಕಾರ ಸಾಕಷ್ಟು ವರ್ಷಗಳಿಂದ ನಗರ ಸ್ವಚ್ಛತೆಯ ಕಾರ್ಯ ಮಾಡುತ್ತಿರುವ ಪುರಸಭೆಯ ಕೆಲಸಗಾರರನ್ನು ಖಾಯಂ ಗೊಳಿಸಿದ್ದಕ್ಕಾಗಿ ಅಭಿನಂದಿಸಿದರು. ಯುವ ಮುಖಂಡ ಬಸವರಾಜ್ ಭೂತಾಳಿ ಮಾತನಾಡಿ ಕಡೆಗಣಿಸಿದ ಸಮಾಜದ ಕಟ್ಟ ಕಡೆಯ ಸಮಾಜದ ವ್ಯಕ್ತಿಯನ್ನು ಗುರುತಿಸಿ ಅವರನ್ನು ಗೌರವಿಸುತ್ತಿರುವ ಯುವ ಬ್ರಿಗೇಡ್ ನ ಎಲ್ಲಾ ಕಾರ್ಯಕರ್ತರನ್ನು ನೆನೆಸಿ, ನವರಾತ್ರಿ ಸಂದರ್ಭದಲ್ಲಿ ಈ ಕಾರ್ಯ ಉತ್ತಮ ಎಂದು ಹೇಳಿದರು.

ವೇದಿಕೆಯ ಮೇಲೆ ಕುಬೇರಪ್ಪ ಬಡಿಗೇರ ಬೇಲೂರಪ್ಪ ವಡ್ಡರ, ಸುನಿಲ್ ಬಂಗಾರಶೆಟ್ಟರ, ರೆಹಮಾನ್ ಕೆರಕಲಮಟ್ಟಿ, ರವಿ ಪೂಜಾರ, ಇಷ್ಟಲಿಂಗ ನರೇಗಲ್, ರೆಹಮಾನ್ ಕೆರಕಲಮಟ್ಟಿ, ಶಹಜಿ ಪವಾರ, ಉದಯ ಹಾಗೂ ಯುವ ಬ್ರಿಗೇಡ್ ಕಾರಯಕರ್ತರು ಹಾಜರಿದ್ದರು.

Edited By : Nirmala Aralikatti
Kshetra Samachara

Kshetra Samachara

03/10/2022 04:58 pm

Cinque Terre

2.7 K

Cinque Terre

0