ಬಾಗಲಕೋಟೆ: ಕೊಣ್ಣೂರ ನುಡಿ ಸಡಗರ ಅಕ್ಷರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಕಾರ ಕ್ಷೇತ್ರದಲ್ಲಿನ ಸಾಧನೆಗೆ ಉದಯ ಸಾರವಾಡ, ಶಿಕ್ಷಣ ಸಂಸ್ಥೆ ಸಾಧನೆಗೆ ಮುಧೋಳದ ಅರಳಿಕಟ್ಟಿ ಫೌಂಡೇಶನ್ ,ಕನ್ನಡ,ಹಿಂದಿ ಅಲ್ಬಂ ಹಾಡುಗಳ ಗಾಯಕ ರುಮಿತ್ ಕೆ. ಮತ್ತು ವೈದ್ಯ ಪ್ರಶಸ್ತಿಗೆ ಅಥಣಿಯ ಡಾ. ಗುರುಪುತ್ರ ಪಾಟೀಲರನ್ನು ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪುರಸ್ಕೃತರ ಪರವಾಗಿ ಮಾತನಾಡಿದ ಮುಧೋಳದ ಡಾ.ಟಿ.ವ್ಹಿ.ಅರಳಿಕಟ್ಟಿ ನಮ್ಮ ಸಂಸ್ಥೆ ಆರಂಭಕ್ಕೆ ಬೆನ್ನೆಲುಬಾಗಿ ನಿಂತಿದ್ದಲ್ಲದೇ, ಮಾರ್ಗದರ್ಶಕರಾಗಿ ನಿಂತು ಪ್ರೇರಣೆ ನೀಡಿದ ಪ್ರೊ.ಬಸವರಾಜ ಕೊಣ್ಣೂರ ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರೂ ನಮ್ಮ ಸಾಧನೆ ಮೆಚ್ಚಿ ಪ್ರಶಸ್ತಿ ನೀಡಿದ್ದಾರೆ.
ಸಹಕಾರಿ ಬ್ಯಾಂಕ್‌ಗಳ ಸ್ಥಾಪನೆ ಮತ್ತು ನಿರ್ವಹಣೆ ಮಾಡುವಲ್ಲಿಯೂ ನಮಗೆ ನೆರವಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅವರದೇ ಸಾಧನೆ ಬೆಟ್ಟದಷ್ಟಿದ್ದರೂ ನಮ್ಮ ಅಳಿಲು ಸೇವೆ ಗುರ್ತಿಸಿ ಪ್ರಶಸ್ತಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಪ್ರೊ.ಬಸವರಾಜ ಕೊಣ್ಣೂರ, ಭರಮಪ್ಪ ಕೊಣ್ಣೂರ, ಕಾರ್ಯಾಧ್ಯಕ್ಷ ಶೀತಲ ಕೊಣ್ಣೂರ, ಉಪಾಧ್ಯಕ್ಷ ನಿಖಿಲ್ ಕೊಣ್ಣೂರ, ಶಿವಾನಂದ ದಾಶ್ಯಾಳ, ವಸಂತ ಹಜಾರೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
20/09/2022 06:02 pm