ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ತ ಇಂದು ನಗರದಲ್ಲಿ ಬೃಹತ್ ಪಥಸಂಚಲನ ಅದ್ದೂರಿಯಾಗಿ ನಡೆಯಿತು.
ಪಥಸಂಚಲನ ಹಿನ್ನೆಲೆಯಲ್ಲಿ ಸಿಂಗಾರಗೊಂಡಿದ್ದ ನಗರದ ಪ್ರಮುಖ ರಸ್ತೆಯಲ್ಲಿ ಬಿವಿವಿ ಸಂಘದ ಆವರಣದಿಂದ ಹೋರಟಾಗ ಮಾರ್ಗದುದ್ದಕ್ಕೂ ಪುಷ್ಪವೃಷ್ಟಿಯ ಮಳೆಗರೆದು ಜನತೆ ಪಥಸಂಚಲನ ಸ್ವಾಗತಿಸಿ ಸಂಭ್ರಮಿಸಿದರು. ಪಥಸಂಚಲನ ಮಾರ್ಗದ ಇಕ್ಕೆಲಗಳಲ್ಲಿ ಮಹಿಳೆಯರು ಸೇರಿದಂತೆ ಸಹಸ್ರಾರು ಜನ ಅಭಿಮಾನಿ ಗಳು ಜಯಘೋಷಗಳೊಂದಿಗೆ ಗಣವೇಷಧಾರಿಗಳನ್ನು ಹಾರೈಸುತ್ತಿದ್ದರು.
ಬಿವಿವಿ ಸಂಘದ ಆವರಣದಿಂದ ಬೀಳೂರು ಅಜ್ಜನವರ ದೇವಸ್ಥಾನ ವರೆಗೆ ಒಟ್ಟಾಗಿ ಬಂದ ಘನವೇಷಧಾರಿಗಳ ಪಥಸಂಚಲನ ಅಲ್ಲಿಂದ ಎರಡು ತಂಡಗಳಾಗಿ, ಒಂದು ಪಟ್ಟಣ ಹಳೆಯ ಭಾಗದತ್ತ, ಇನ್ನೊಂದು ಬಸ್ ನಿಲ್ದಾಣದ ಮಾರ್ಗದತ್ತ ಹೋರಟವು. ಬೇರೆಯಾಗಿ ಹೊರಟ ಘನವೇಷಧಾರಿಗಳ ತಂಡಗಳು ಪ್ರಮುಖ ಬೀದಿಗಳಲ್ಲಿ ಪ್ರತ್ಯೇಕವಾಗಿ ಹೊರಟು, ಬಳಿಕ ಅವು ಬಸವೇಶ್ವರ ವೃತ್ತದಲ್ಲಿ ಒಂದಾಗಿ ಸಾಗುವ ರೋಮಾಂಚನ ದೃಶ್ಯ ಕಣ್ತುಂಬಿಕೊಳ್ಳಲು ಭಾರಿ ಪ್ರಮಾಣದಲ್ಲಿ ಜನಸ್ತೋಮ ಜಮಾಯಿಸಿತ್ತು. ರಸ್ತೆಯ ಅಕ್ಕಪಕ್ಕದಲ್ಲಷ್ಟೆ ಅಲ್ಲ ಮಾಳಿಗೆ, ಮಹಡಿಗಳನ್ನು ಏರಿದ್ದರು.
ಪಥಸಂಚಲನ ಒಗ್ಗೂಡುವ ಸ್ಥಳದಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಎಚ್. ಆರ್. ನಿರಾಣಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ತೋವಿವಿ ಕುಲಪತಿ ಕೆ.ಎಂ. ಇಂದಿರೇಶ್, ಸಂಘದ ಪ್ರಮುಖರು ಇದ್ದರು. ಪಥಸಂಚಲನ ಬಳಿಕ ಬಿವಿವಿ ಸಂಘದ ಬಸವೇಶ್ವರ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
Kshetra Samachara
09/10/2022 10:40 pm